ಸಿದ್ದಾಪುರ: ಪಟ್ಟಣದ ನಾಗಭೂಷಣ ಜೆ. ಚೌಧರಿ ಅವರು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಿಂದ ಭೌತಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಪಿಎಚ್.ಡಿ ಪದವಿ ಲಭಿಸಿದೆ.
ಅವರು ಇನ್ವೆಸ್ಟಿಗೇಶನ್ ಆಫ್ ಥಮೌಲಿ ಇವಾಪೋರ್ಟೆಡ್ ಕೆಸ್ಟರೈಟ್ ಥಿನ್ ಫಿಲ್ಮ್ಸ ಯಾಸ್ ಯಾನ್ ಅಬ್ಸರ್ಬರ್ ಲೇಯರ್ ಫಾರ್ ಸೋಲಾರ್ ಸೇಲ್ಸ ವಿಷಯದಲ್ಲಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವಿಶ್ವವಿದ್ಯಾಲಯ ಪಿಎಚ್.ಡಿ ನೀಡಿ ಗೌರವಿಸಿದೆ.
ನಾಗಭೂಷಣ ಅವರು ಭೌತಶಾಸ್ತ್ರ ವಿಭಾಗದ ಡಾ. ರವಿಪ್ರಕಾಶ ವೈ. ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.