ಜಿಲ್ಲೆ

ಪದ್ಮಾಂಜಲಿ ಶಾಲೆಯಲ್ಲಿ ನಾಗಪಂಚಮಿ ಆಚರಣೆ

ವಿಜಯಪುರ : ನಗರದ ಪದ್ಮಾಂಜಲಿ ಶಾಲೆಯಲ್ಲಿ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ, ನಾಗರ ಪಂಚಮಿಯ ಮಹತ್ವ ತಿಳಿಸಿದರು.

ಹೆಣ್ಣು ಮಕ್ಕಳು ಮೆಹಂದಿ ಹಾಕುವುದು, ಬಳೆ ತೊಡಿಸುವುದು ಮತ್ತು ಪುಗುಡಿ ಆಟ ಮತ್ತು ಜೋಕಾಲಿ ಆಡುವ ಮೂಲಕ ಹಬ್ಬದ ಸಂಭ್ರಮ ಹೆಚ್ಚಿಸಿದರು. ಗಂಡು ಮಕ್ಕಳು ಕೊಬ್ಬರಿ ದಾರದ ಆಟದಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ವಿದ್ಯಾರ್ಥಿಗಳು " ಪಂಚಮಿ ಹಬ್ಬ ಉಳಿದೈತಿ ದಿನ ನಾಕಾ ಅಣ್ಣ ಬರಲಿಲ್ಲ ಕರಿಯೋಕೆ' ಜಾನಪದ ಗಾಯನ ಹಾಡಿ ಸಂಭ್ರಮಿಸಿದರು.

ನಂತರ ಹಾವಿನ ಹುತ್ತಕ್ಕೆ ಹಾಲು ಎರೆದು ಸಹೊದರರಿಗೆ ದೀರ್ಘಾಯುಷ್ಯ ಕೊಡಲಿ ಎಂದು ಪ್ರಾರ್ಥಿಸಿದರು.

ಸಿಂಚನ, ಭೂಮಿಕಾ, ಅಂಕಿತ, ಆರ್ತಿ, ಸೃಷ್ಟಿ, ವೈಶಾಲಿ, ತನುಜ, ಮಯೂರಿ ಇತರರಿದ್ದರು.

ವಿಜಯಪುರದ ಪದ್ಮಾಂಜಲಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನಾಗರ ಪಂಚಮಿ ಹಬ್ಬದಲ್ಲಿ ವಿದ್ಯಾರ್ಥಿನಿಯರು ಹಾವಿನ ಹುತ್ತಕ್ಕೆ ಹಾಲು ಎರೆದರು. ಸಿಂಚನ, ಭೂಮಿಕಾ, ಅಂಕಿತ ಇತರರಿದ್ದಾರೆ.