ಜಿಲ್ಲೆ

ಹಳ್ಳಿಬೈಲ್​ನಲ್ಲಿ ನಾಗ ಪ್ರತಿಷ್ಠಾಪನೆ ಕಾರ್ಯಕ್ರಮ

ಸಿದ್ದಾಪುರ: ತಾಲೂಕಿನ ಹಳ್ಳಿಬೈಲ್​ನಲ್ಲಿ ಅಶ್ವತ್ಥ ಉಪನಯನ ಹಾಗೂ ನಾಗ ಪ್ರತಿಷ್ಠಾಪನಾ ಕಾರ್ಯಕ್ರಮ ಎರಡು ದಿನಗಳ ಕಾಲ ವಿವಿಧ ಧಾರ್ವಿುಕ ಕಾರ್ಯಕ್ರಮದೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು.

ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.

ಸಭಾಕಾರ್ಯಕ್ರಮ: ಎರಡನೇ ದಿನ ಸಂಜೆ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ವೇ. ಕಮಲಾಕರ ಭಟ್ಟ ಬೆಂಗಳೂರು, ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಸಾಮಾಜಿಕ ಕಾರ್ಯಕರ್ತ ತಿಮ್ಮಪ್ಪ ಎಂ.ಕೆ, ನಾಗರಾಜ ನಾಯ್ಕ ಬೇಡ್ಕಣಿ,ಕೆ. ಆರ್. ವಿನಾಯಕ ಇತರರು ಉಪಸ್ಥಿತರಿದ್ದರು.

ಈರಾ ಈರಾ ನಾಯ್ಕ ಹಳ್ಳಿಬೈಲ್, ಮಂಜುನಾಥ ಗಣಪತಿ ಭಟ್ಟ ಕೆರೆಹೊಂಡ, ಸುಬ್ರಾಯ ನಾರಾಯಣ ಭಟ್ಟ ಕೆರೆಹೊಂಡ, ಕೇಶವ ಹೆಗಡೆ ಕೊಳಗಿ ದಂಪತಿಯನ್ನು ಸನ್ಮಾನಿಸಲಾಯಿತು. ಪ್ರಸನ್ನಕುಮಾರ ಭಟ್ಟ ಕೆರೆಹೊಂಡ ಕಾರ್ಯಕ್ರಮ ನಿರ್ವಹಿಸಿದರು.

ನಂತರ ಮೆಕ್ಕೆಕಟ್ಟು ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ರಾಮನಿರ್ಯಾಣ, ಮಾಗಧವದೆ ಹಾಗೂ ಬಬ್ರುವಾಹನ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.