ತೇರದಾಳದ ಸಿದ್ದೇಶ್ವರ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಕನಕದಾಸ ಜಯಂತಿ ಆಚರಿಸಲಾಯಿತು. 
ಜಿಲ್ಲೆ

ನಾಡುಕಂಡ ಅಪ್ರತಿಮ ದಾಸರು

ದತ್ತಾತ್ರೇಯ ಪಿ ಕುಲಕರ್ಣಿ

ತೇರದಾಳ: ಕನಕದಾಸರ ಸಾಮಾಜಿಕ ಚಿಂತನೆ ಎಲ್ಲ ಜಾತಿ-ಧರ್ಮಗಳಿಗೂ ಆದರ್ಶಪ್ರಾಯವಾಗಿರುವಂತದ್ದು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನೆ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಕರೆಯಲಾಗುತ್ತದೆ. ಸಾಹಿತ್ಯದ ಜೊತೆಗೆ ಸಂಗೀತಕ್ಕೆ ಒತ್ತುಕೊಟ್ಟು ಉಭಯ ಸಂತರು ದಾಸ ಪರಂಪರೆಯಲ್ಲಿ ಅಜರಾಮರರಾಗಿದ್ದಾರೆ ಎಂದು ಸಾಹಿತಿ ವಿ.ಬಿ.ಕುಕನೂರ ಹೇಳಿದರು.

ಪಟ್ಟಣದ ಪ್ರತಿಷ್ಠಿತ ಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಸಿದ್ದೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕನಕದಾಸರ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪೂಜಿಸಿದ ನಂತರ ಮಾತನಾಡಿದ ಅವರು, ಕನಕದಾಸರು ರಚಿಸಿದ ಕತಿಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದಿವೆ.

ಸಮಾಜದ ಜಾಗತಿಗೆ ಪ್ರಮುಖ ಪಾತ್ರ ವಹಿಸುತ್ತಿವೆ. ಕನಕದಾಸರು ಕಷ್ಣನ ಪರಮ ಭಕ್ತರಾಗಿದ್ದರು. ಅವರ ಹೆಚ್ಚಿನ ಹಾಡುಗಳು ಕಷ್ಣನ ಕುರಿತು ಇವೆ. ಕನಕದಾಸರು ನಮ್ಮಿಂದ ಮರೆಯಾದರು. ಅವರು ರಚಿಸಿದ ಕೀರ್ತನೆಗಳು ಹಾಗೂ ಹಾಡುಗಳು ಇಂದಿಗೂ ನಮ್ಮ ಜೊತೆಗಿವೆ ಎಂದರು. ಟಿ.ಎಸ್.ಬಿರಾದಾರ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ವಿದ್ಯಾರ್ಥಿಗಳು ಕನಕದಾಸರ ಕೀರ್ತನೆ ಹೇಳಿದರು. ಮುಖ್ಯಶಿಕ್ಷಕ ಬಿ.ಜಿ.ಮುದಕನ್ನವರ, ವಿ.ಎಸ್. ಅಂಗಡಿ, ಎ.ಎಸ್.ತಳವಾರ, ಡಿ.ಎ.ಉಗಾರ, ಬಿ.ಸಿ.ಮುಕರಿ, ಆರ್.ವಿ.ಬೂದಿಹಾಳ, ಎಸ್.ಎಸ್.ಬೆಳಗಲಿ ಇದ್ದರು.