ಮಡಿಕೇರಿ:
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಕಡ್ಲೇರ ತುಳಸಿ ಮೋಹನ್ ಆಯ್ಕೆ ಆಗಿದ್ದಾರೆ. ಗೌರವ ಕಾರ್ಯದರ್ಶಿಗಳಾಗಿ ಪುದಿಯನೆರವನ ರಿಶೀತ್ ಮಾದಯ್ಯ ಮತ್ತು ಬಾಳೆಯಡ ದಿವ್ಯಾ ಮಂದಪ್ಪ, ಕೋಶಾಧಿಕಾರಿಯಾಗಿ ಸಿದ್ದರಾಜು ಬೆಳ್ಳಯ್ಯ, ಸಂಘಟನಾ ಕಾರ್ಯದರ್ಶಿಯಾಗಿ ಚೊಕ್ಕಾಡಿ ಪ್ರೇಮಾ ರಾಘವಯ್ಯ ಹಾಗೂ ತಳೂರು ದಿನೇಶ್ ಕರುಂಬಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಎಚ್.ಟಿ. ಅನಿಲ್, ಮಹಿಳಾ ಪ್ರತಿನಿಧಿಗಳಾಗಿ ಶೋಭಾ ಸುಬ್ಬಯ್ಯ, ಗೌರಮ್ಮ ಮಾದಮಯ್ಯ, ಪರಿಶಿಷ್ಟ ಜಾತಿ ಪ್ರತಿನಿಧಿಗಳಾಗಿ ಬಿ. ಎಲ್. ಸಂದೇಶ್ ಮತ್ತು ಎಚ್.ಪಿ ಜಯಮ್ಮ, ಪರಿಶಿಷ್ಟ ಪಂಗಡ ಪ್ರತಿನಿಧಿಯಾಗಿ ಬಿ.ಎಸ್ ರಂಗಪ್ಪ, ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ಎಂ.ಎಂ ಅಬ್ದುಲ್ಲಾ, ನಿಕಟ ಪೂರ್ವ ಅಧ್ಯಕ್ಷರಾಗಿ ಅಂಬೇಕಲ್ ನವೀನ್ ಅವರನ್ನು ಆಯ್ಕೆ ಮಾಡಿ ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ ಕೇಶವ ಕಾಮತ್ ಆದೇಶಿಸಿದ್ದಾರೆ ಎಂದು ಜಿಲ್ಲಾ ಗೌರವ ಕಾರ್ಯದರ್ಶಿ ಎಸ್. ಐ. ಮುನೀರ್ ಅಹ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪದನಿಮಿತ್ತ ಪ್ರತಿನಿಧಿಗಳಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಡಿಕೇರಿ. ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಪ್ರಾಂಶುಪಾಲರು, ಶ್ರೀ ರಾಜರಾಜೇಶ್ವರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಪುರುಷೊತ್ತಮ್, ಸಂಜೀವಿನಿ ಒಕ್ಕೂಟದ ತಾಲೂಕು ಅಧ್ಯಕ್ಷೆ ರೇಖಾ, ಅಂಗನವಾಡಿ ಕಾರ್ಯಕರ್ತೆಯ ಸಂಸ್ಥೆಯ ತಾಲೂಕು ಅಧ್ಯಕ್ಷೆ ಸಿ.ಯು. ಪವಿತ್ರ ಕಾರ್ಯನಿರ್ವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಕುಡೆಕಲ್ ಸಂತೋಷ್, ಪಿ.ಪಿ ಸೋನಾ ಪ್ರೀತು, ಪೂರ್ಣಿಮಾ ಜೋಶಿ, ಸುನಿಲ್ ಲೋಬೊ, ಮೆಹಬೂಬ್ ಖಾನ್, ಕೆ.ಯು ರಂಜಿತ್, ಗೀತಾ ಗಿರೀಶ್, ಎಂ.ಎಂ ಅಹಮದ್ ಆಲಿ, ಯು.ಸಿ ದಮಯಂತಿ, ಹರೀಶ್ ಸರಳಾಯ, ವಿ ಜಯರಾಜ್, ಜೆ ಮಹೇಶ್ವರ್, ವಿನೋದ್ ಮೂಡಗೆದ್ದೆ, ಚಿತ್ರ ಆರ್ಯನ್ ಅವರನ್ನು ನೇಮಿಸಲಾಗಿದೆ. ನಿಕಟ ಪೂರ್ವ ಅಧ್ಯಕ್ಷ ಅಂಬೆಕಲ್ ನವೀನ್ ತಮ್ಮ ಕಾರ್ಯಬಾಹುಳ್ಯದ ಕಾರಣ ನೀಡಿ ರಾಜೀನಾಮೆ ಕೊಟ್ಟಿದ್ದರು. ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಕಡ್ಲೇರ ತುಳಸಿ ಮೋಹನ್ ಮೊದಲ ಮಹಿಳಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.