ನಡವಿ ಗ್ರಾಮದಲ್ಲಿ ಪ್ರಾಥಮಿಕ ವಿಭಾಗದ ಸಿರಿಗೇರಿ ಮತ್ತು ಎಂ.ಸೂಗೂರು ಕ್ಲಸ್ಟರ್‌ಗಳ ವಲಯ ಮಟ್ಟದ ಕ್ರೀಡಾ ಕೂಟಕ್ಕೆ ಗ್ರಾಪಂ ಉಪಾಧ್ಯಕ್ಷೆ ಸಿದ್ದಮ್ಮ ಚಾಲನೆ ನೀಡಿದರು. ಇಸಿಒ ಎಚ್.ಪಂಪಾಪತಿ, ದೈಹಿಕ ಶಿಕ್ಷಣಾಧಿಕಾರಿ ರಮೇಶ್, ಪ್ರಾಚಾರ್ಯ ಸಣ್ಣ ದುರ್ಗಪ್ಪ ಇದ್ದರು. 
ಜಿಲ್ಲೆ

ಕ್ರೀಡೆಯಲ್ಲಿ ಎಲ್ಲರೂ ಪಾಲ್ಗೊಳ್ಳಿ

ಸಿರಿಗೇರಿ: ಕ್ರೀಡೆಗಳಿಂದ ದೈಹಿಕ ಸದೃಢ ಹೊಂದಲು ಸಾಧ್ಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ನಡವಿ ಗ್ರಾಪಂ ಉಪಾಧ್ಯಕ್ಷೆ ಸಿದ್ದಮ್ಮ ಹೇಳಿದರು.

ಕ್ರೀಡೆಯಿಂದ ದೈಹಿಕ ಸದೃಢತೆ

ಸಮೀಪದ ನಡವಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಬುಧವಾರ ಸಿರಿಗೇರಿ ಮತ್ತು ಎಂ.ಸೂಗೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಣ ಇಲಾಖೆಯ ಇಸಿಒ ಎಚ್.ಪಂಪಾಪತಿ ಮಾತನಾಡಿ, ಕ್ರೀಡೆಗಳಲ್ಲಿ ತೀರ್ಪುಗಾರರ ನಿರ್ಣಯಕ್ಕೆ ಬದ್ಧರಾಗಿರಬೇಕು. ಅಚಲವಾದ ಗುರಿಯಿಂದ ಕ್ರೀಡೆಗಳಲ್ಲಿ ಜಯಗಳಿಸಬಹುದು. ಆದರೆ, ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ಹೊಂದಿರಬೇಕು ಎಂದು ಹೇಳಿದರು.

ತಾಲೂಕು ಪ್ರಭಾರಿ ದೈಹಿಕ ಶಿಕ್ಷಣಾಧಿಕಾರಿ ರಮೇಶ್ ಮಾತನಾಡಿದರು. ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ಸಣ್ಣ ದುರ್ಗಪ್ಪ, ಗ್ರಾಪಂ ಸದಸ್ಯ ಹನುಮಂತಪ್ಪ, ಬಿಆರ್‌ಪಿಗಳಾದ ವೀರೇಶಪ್ಪ, ಕಾಳಿಂಗಪ್ಪ, ಸಿಆರ್‌ಪಿಗಳಾದ ಅರುಣ್ ಕುಮಾರ್, ಪ್ರಭುರಾಜ್, ದೈಹಿಕ ಶಿಕ್ಷಕ ಸಂಘದ ಗೌರವಾಧ್ಯಕ್ಷ ಬಿ.ಚಿನ್ನಪ್ಪ,ದೈಹಿಕ ಶಿಕ್ಷಕರಾದ ಉಪೇಂದ್ರ, ಕೃಷ್ಣಮೂರ್ತಿ, ಮಂಜುಳ, ಲಕ್ಷ್ಮೀ ದೇವಿ, ಹೊನ್ನೂರ್ ನಾಯ್ಕ, ಅಂಜಿನಪ್ಪ ಇನ್ನಿತರರಿದ್ದರು. ಕ್ರೀಡಾಕೂಟದಲ್ಲಿ 22 ಶಾಲೆಗಳು ಭಾಗವಹಿಸಿದ್ದವು.