ಶನಿವಾರಸಂತೆ ಕೆಆರ್‌ಸಿ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು ಆಚರಿಸಲಾಯಿತು. ಡಿ.ಎಲ್.ಮೂರ್ತಿ, ಸಿ.ಎಲ್.ಗಿರೀಶ್, ಎನ್.ಕೆ.ಅಪ್ಪಸ್ವಾಮಿ, ಕೇಶವಮೂರ್ತಿ, ಶಾಂತಪ್ಪ, ಪ್ರಕಾಶ್, ಯೋಗಾನಂದ್, ಚಂದ್ರಕಾಂತ್, ರಾಮಚಂದ್ರ, ಮಿಲ್ ಪ್ರಭಾಕರ್, ಹರಪಳ್ಳಿ ಆನಂದ್, ಹೊಸೂರು ಮದನ್, ಎಸ್.ಆನಂದ್, ಅಪ್ಪಶೆಟ್ಟಳ್ಳಿ ಕಿರಣ್, ಪೈಂಟ್ ಮಂಜು ಇತರರು ಇದ್ದರು. 
ಜಿಲ್ಲೆ

ರೈತರು, ಕೃಷಿಗೆ ಪ್ರೋತ್ಸಾಹ ನೀಡಿದ್ದ ನಾಡಪ್ರಭು

ಶನಿವಾರಸಂತೆ: ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು ಶನಿವಾರಸಂತೆ ಸುತ್ತಮುತ್ತಲಿನ ಕೆಂಪೇಗೌಡರ ಅಭಿಮಾನಿ ಬಳಗ ಮತ್ತು ಸಾರ್ವಜನಿಕರು ಮತ್ತು ದಾನಿಗಳ ಸಹಭಾಗಿತ್ವದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸುವ ಮೂಲಕ ಆಚರಿಸಲಾಯಿತು.

ಶಿಕ್ಷಕ ಡಿ.ಎಲ್.ಮೂರ್ತಿ ಮಾತನಾಡಿ, ಬೆಂಗಳೂರನ್ನು ನಿರ್ಮಾಣ ಮಾಡಿದ ಕೆಂಪೇಗೌಡರ ಕೊಡುಗೆ ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ. ಇಡೀ ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಆಡಳಿತಾವಧಿಯಲ್ಲಿ ಬೆಂಗಳೂರಿನಲ್ಲಿ ಕೆರೆಗಳನ್ನು ನಿರ್ಮಿಸುವ ಮೂಲಕ ರೈತರನ್ನು ಮತ್ತು ಕೃಷಿಯನ್ನು ಪ್ರೋತ್ಸಾಹಿಸಿದರು. ಕೆಂಪೇಗೌಡರಲ್ಲಿದ್ದ ದೂರದೃಷ್ಟಿ, ಆದರ್ಶ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುವಂತೆ ಮನವಿ ಮಾಡಿದರು.

ದುಂಡಳ್ಳಿ ಗ್ರಾ.ಪಂ. ಸದಸ್ಯ ಸಿ.ಎಲ್.ಗಿರೀಶ್ ಮಾತನಾಡಿ, ನಾಡಪ್ರಭು ಕೆಂಪೇಗೌಡರಂತೆ ನಾವೂ ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯದಲ್ಲಿ ಮುಂದಾಗುವಂತೆ ಸಲಹೆ ನೀಡಿದರು.

ಶನಿವಾರಸಂತೆ ಒಕ್ಕಲಿಗರ ಸಂಘದ ಅಧ್ಯಕ್ಷ ಎನ್.ಕೆ.ಅಪ್ಪಸ್ವಾಮಿ, ಪ್ರಮುಖರಾದ ಕೇಶವಮೂರ್ತಿ, ಶಾಂತಪ್ಪ, ಪ್ರಕಾಶ್, ಯೋಗಾನಂದ್, ಚಂದ್ರಕಾಂತ್, ರಾಮಚಂದ್ರ, ಮಿಲ್ ಪ್ರಭಾಕರ್, ಹರಪಳ್ಳಿ ಆನಂದ್, ಹೊಸೂರು ಮದನ್, ಎಸ್.ಆನಂದ್, ಅಪ್ಪಶೆಟ್ಟಳ್ಳಿ ಕಿರಣ್, ಪೈಂಟ್ ಮಂಜು ಇತರರು ಇದ್ದರು.