ಜಿಲ್ಲೆ

ಮಾದರಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರು: ಮಹೇಶ ಜೋಶಿ

ಪಂಕಜ ಕೆ.ಎಂ.

ಬೆಂಗಳೂರು: ನಾಡಪ್ರಭು ಕೆಂಪೇಗೌಡರು ಕೆರೆಗಳನ್ನು ಕಟ್ಟಿಸಿ ಮತ್ತು ಸಾಲುಮರಗಳನ್ನು ನೆಡುವ ಮೂಲಕ ತಂಪಾದ ವಾತಾವರಣ ನಿರ್ಮಾಣವಾಗುವ ರೀತಿಯಲ್ಲಿ ಅತ್ಯಂತ ಸುಂದರ ಹಾಗೂ ಮಾದರಿಯಾಗಿ ಬೆಂಗಳೂರು ನಗರವನ್ನು ನಿರ್ಮಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಬಣ್ಣಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುರುವಾರ ಅಯೋಜಿತವಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಸಾಮಂತ ದೊರೆಗಳಾಗಿದ್ದರೂ ವಿಜಯನಗರದ ರಾಜಧಾನಿ ಹಂಪಿಯ ಮಾದರಿಯನ್ನು ಕಲ್ಪಿಸಿ ಕೊಂಡು ಕ್ರಿ.ಶ 1537ರಲ್ಲಿ ಬೆಂಗಳೂರು ನಗರವನ್ನು ನಿರ್ಮಿಸಿದರು. ಅವರು ರೂಪಿಸಿದ ಕಾವಲು ಗೋಪುರಗಳು ನಗರದ ಮಿತಿಯನ್ನು ಸೂಚಿಸುತ್ತಿದ್ದವು. ಈ ಮಿತಿಯೊಳಗಿದ್ದರೆ ನಗರಕ್ಕೆ ಬೇಕಾದ ನೀರು, ಆಹಾರದ ವ್ಯವಸ್ಥೆಯನ್ನು ಒದಗಿಸಲು ಸಾಧ್ಯವೆಂದು ಅವರು ಅರಿತಿದ್ದರು. ಆದರೆ ಆ ಮಿತಿಯು ಮೀರಿದರ ಪರಿಣಾಮವನ್ನು ಇಂದು ನಾವೆಲ್ಲ ಎದುರಿಸುತ್ತಿದ್ದೇವೆ ಎಂದು ಹೇಳಿದರು.

ಕೆಂಪೇಗೌಡರು ಕಲೆ, ಸಾಹಿತ್ಯದ ಪೋಷಕರಾಗದ್ದರು, ಮುಖ್ಯ ಕನ್ನಡ ಭಾಷೆಯ ಪ್ರೇಮಿಗಳಾಗಿದ್ದರು. ಈ ಕಾರಣದಿಂದಲೇ ಮುಂದೆ ಬೆಂಗಳೂರಿನಲ್ಲಿ ಕಲೆ, ಸಂಸ್ಕೃತಿ, ಶಿಕ್ಷಣ ಸಂಸ್ಥೆಗಳು ಬೆಳೆಯಲು ಸಾಧ್ಯವಾಯಿತು. ಇಂದಿಗೂ ಹೊಸ ನಗರವನ್ನು ನಿರ್ಮಿಸುವಾಗ ಬೆಂಗಳೂರನ್ನು ಮಾದರಿಯಾಗಿ ನೋಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪರಿಷತ್ತು ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು , ಪ್ರಕಟಣಾ ವಿಭಾಗದ ಸಂಚಾಲಕ ಎನ್.ಎಸ್. ಶ್ರೀಧರ ಮೂರ್ತಿ ಇತರರು ಇದ್ದರು.