ತಾಳಿಕೋಟೆ ಪಟ್ಟಣದಲ್ಲಿ ರಜಪೂತ ಸಮಾಜ ಬಾಂಧವರು ಪ್ರತಿಷ್ಠಾಪಿಸಿದ್ದ ನಾಡದೇವಿ ಮೂರ್ತಿಯನ್ನು ಭವ್ಯ ರಥದಲ್ಲಿ ಮೆರವಣಿಗೆ ಮಾಡಿದರು. 
ಜಿಲ್ಲೆ

ನಾಡದೇವಿ ಮೂರ್ತಿ ಶೋಭಾಯಾತ್ರೆ

ಗಿರೀಶ ಸಗರ

ತಾಳಿಕೋಟೆ: ಪಟ್ಟಣದಲ್ಲಿ ನವರಾತ್ರೋತ್ಸವ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ನಾಡದೇವಿ ಮೂರ್ತಿಯ ಭವ್ಯ ಶೋಭಾಯಾತ್ರೆ ನಡೆಸುವ ಮೂಲಕ ದಸರಾ ಉತ್ಸವಕ್ಕೆ ಭಾನುವಾರ ತೆರೆ ಎಳೆಯಲಾಯಿತು.

ಪಟ್ಟಣದ ರಜಪೂತ ಬಡಾವಣೆ, ಕಾಮನಕಟ್ಟಿ ಬಡಾವಣೆ, ವಿಠ್ಠಲ ಮಂದಿರ ಹಾಗು ತಿಲಕ ರಸ್ತೆ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ ದೇವಿಯರಿಗೆ 9 ದಿನ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು. ಭಾನುವಾರ ಸಂಜೆ ರಜಪೂತ ಸಮಾಜ ಬಾಂಧವರು ಶ್ರೀದೇವಿಯನ್ನು ಭವ್ಯ ರಥದಲ್ಲಿ ಮೆರವಣಿಗೆ

ಡೆಸಿದರು. ಮೆರವಣಿಗೆ ಖಾಸ್ಗತೇಶ್ವರ ಮಠ, ಕತ್ರಿ ಬಜಾರ್​, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜ ವೃತ್ತದ ಮೂಲಕ ಮಹಾರಾಣಾಪ್ರತಾಪ ವೃತ್ತದವರೆಗೆ ಮೆರವಣಿಗೆ ಜರುಗಿ ಮುಕ್ತಾಯಗೊಂಡಿತು.

ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್​ಐ ರಾಮನಗೌಡ ಸಂಕನಾಳ, ಆರ್​.ಎಸ್​.ಭಂಗಿ ಪೊಲೀಸ್​ ಸಿಬ್ಬಂದಿಯೊಂದಿಗೆ ಭದ್ರತೆ ಒದಗಿಸಿದ್ದರು.