ಜಿಲ್ಲೆ

ಕೋಟ ಸಹಕಾರಿಗೆ ನಬಾರ್ಡ್ ಅಧಿಕಾರಿಗಳ ಭೇಟಿ

ಇಂದಿರಾ ಎನ್ ಕೆ

ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘ ಮುಖ್ಯಕಚೇರಿಗೆ ನಬಾರ್ಡ್‌ನ ಉಪ ಮಹಾಪ್ರಬಂಧಕ ಯೋಗೀಶ ನೇತೃತ್ವದಲ್ಲಿ ಒಡಿಸ್ಸಾ ರಾಜ್ಯದ ಭುವನೇಶ್ವರದ ಸಹಕಾರ ಇಲಾಖೆ ಮತ್ತು ಆರ್‌ಸಿಎಸ್ ಅಧಿಕಾರಿಗಳು ಇತ್ತೀಚೆಗೆ ಭೇಟಿ ನೀಡಿದರು.

ಕೋಟ ಸಂಘ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಸ್ವಾಗತಿಸಿದರು. ನಬಾರ್ಡ್ ಅಧಿಕಾರಿಗಳು ಸಂಘದ ಆರ್ಥಿಕ ಅಭಿವೃದ್ಧಿ, ಸಾಲ ನೀಡುವಿಕೆ ಮತ್ತು ವಸೂಲಾತಿ, ಸ್ವಸಹಾಯ ಸಂಘಗಳ ಕಾರ್ಯಚಟುವಟಿಕೆ ಮತ್ತು ಸಂಘದ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಚರ್ಚೆಯ ಮೂಲಕ ವಿಚಾರ ವಿನಿಮಯ ಮಾಡಿಕೊಂಡರು. ಬಂಡವಾಳವನ್ನು ಸಾಲ ನೀಡುವಿಕೆಯೊಂದಿಗೆ ಸಾರ್ವಜನಿಕರಿಗೆ ಸಹಕಾರಿಯಾಗುವ ಇತರ ವ್ಯವಹಾರಗಳಲ್ಲಿ ತೊಡಗಿಸಿ ಅಭಿವೃದ್ಧಿ ಹೊಂದುವಂತೆ ಹಾಗೂ ಸಂಘದ ಎಲ್ಲ ಶಾಖೆಗಳಿಗೆ ಸ್ವಂತ ನಿವೇಶನ ಖರೀದಿಸುವಂತೆ ಸಲಹೆ ನೀಡಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ ಕುಮಾರ್ ಶೆಟ್ಟಿ ವಂದಿಸಿದರು.