ಜಿಲ್ಲೆ

ಗ್ರಾಮೀಣ ಜನರ ಸ್ವಾವಲಂಬಿ ಜೀವನಕ್ಕೆ ನಬಾರ್ಡ್ ನೆರವು

ವಿಜಯವಾಣಿ ಸುದ್ದಿಜಾಲ ಧಾರವಾಡ
ಗ್ರಾಮೀಣ ಭಾಗದ ಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನಬಾರ್ಡ್​ ಸಂಸ್ಥೆಯ ಕಿರು ಉದ್ಯಮ ಅಭಿವೃದ್ಧಿ ತರಬೇತಿಯ ಮೂಲಕ ನೀಡಲಾಗುತ್ತದೆ. ತರಬೇತಿ ಪಡೆದ ಗ್ರಾಮೀಣ ಭಾಗದ ಜನರು ಸ್ವಯಂ ಆಗಿ ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಲೀಡ್​ಬ್ಯಾಂಕ್​ ಮ್ಯಾನೆಜರ್​ ಪ್ರಭುದೇವ ಎಂ. ಎನ್​. ಹೇಳಿದರು.
ನಬಾರ್ಡ್​ ಮತ್ತು ನಾಭ್​ಫಿನ್ಸ್​ (ನಬಾರ್ಡ್​ ಫಿನಾನ್ಸಿಯಲ್​ ಸವಿರ್ಸ್​ ಲಿ.) ವತಿಯಿಂದ ಕಲಟಕಿ ತಾಲೂಕಿನ ಸುರಶೆಟ್ಟಿಕೊಪ್ಪದ ಸವೋರ್ದಯ ಮಹಾಸಂದ ಗ್ರಾಮಚೇತನ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹೈನುಗಾರಿಕೆ 10 ದಿನಗಳ ತರಬೇತಿ ಸಮಾರೋಪ ಸಮಾರಂಭದಲ್ಲಿ ಶಿಬಿರಾಥಿರ್ಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ನಬಾರ್ಡ್​ ಸಂಸ್ಥೆ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಯೂರ ಕಾಂಬ್ಳೆ ಮಾತನಾಡಿ, ನಬಾರ್ಡ್​ ಸಂಸ್ಥೆಯು 10 ದಿನಗಳ ತರಬೇತಿಗೆ ಲಕ್ಷ ರೂ. ಅನುದಾನ ವಿನಿಯೋಗಿಸಿದ್ದು, ಈ ತರಬೇತಿಗೆ 3 ತಿಂಗಳ ಸಿದ್ಧತೆ ಮಾಡಲಾಗಿದೆ. ಪ್ರಾಥಮಿಕ ಹಂತದಲ್ಲಿ ಮಹಿಳಾ ಲಾನುಭವಿಗಳ ಆಯ್ಕೆ ನಂತರ ಅವರ ಸಾಲ ಮರುಪಾವತಿ ಸಾಮರ್ಥ್ಯ ಮತ್ತು ಚರಿತ್ರೆ ನೋಡುವ ಸಿಬಿಲ್​ ಸ್ಕೋರ್​ ಪರಿಶೀಲನೆ ಮಾಡಲಾಯಿತು. 10 ದಿನಗಳ ಕಾಲ ತರಬೇತಿ ನೀಡಲು ಸೂಕ್ತ ತಜ್ಞರನ್ನು ಆಯ್ಕೆ ಮಾಡಿ ತರಬೇತಿ ಆಯೋಜಿಸಲಾಗಿತ್ತು ಎಂದರು.
ತರಬೇತಿ ಪಡೆದ 26 ಜನ ಸದಸ್ಯರಿಗೆ ನಾಭ್​ಫಿನ್ಸ್​ವತಿಯಿಂದ ಪ್ರಮಾಣ ಪತ್ರ ವಿತರಿಸಲಾಗಿದೆ. ತರಬೇತಿ ಪಡೆದ ಸದಸ್ಯರಿಗೆ ರೂ 12.40 ಲ ಮೊತ್ತದ ಸಾಲ ವಿತರಿಸಿದ್ದು, ಕೇಂದ್ರ ಸರ್ಕಾರದ ಮಹತ್ವಾಕಾಂೆ ಯೋಜನೆಗಳಾದ ಡಿಜಿಟಲ್​ ಬ್ಯಾಂಕಿಂಗ್​, ಸುರಾ ಭಿಮಾ ಯೋಜನೆ ಮತ್ತು ಜೀವನ್​ ಭಿಮಾ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದರು.
ಶಿವಾನಂದ ನಂದಗಾಂವ್ಕರ ಮಾತನಾಡಿದರು. ಸವೋರ್ದಯ ಮಹಾಸಂದ ಸಿಇಒ ಜಿ. ವೀರಣ್ಣ, ಸವೋರ್ದಯ ಮಹಾಸಂದ ಅಧ್ಯ ಆರ್​.ಎಸ್​. ಭಾವಿಕಟ್ಟಿ, ನಿಂಗಯ್ಯ ಹಿರೆಮಠ, ಸೋಮಶೇಖರ, ಸದಾನಂದ ಮೊರಬದ, ಬ್ಯಾಂಕ್​ ಆ್​ ಬರೋಡಾ ವ್ಯವಸ್ಥಾಪಕ ರವಿ ನಾಯ್ಕ, ಇತರರು ಇದ್ದರು.