ಜಿಲ್ಲೆ

`ನಾ ರಾಜಗುರು' ಏಕವ್ಯಕ್ತಿ ಪ್ರಯೋಗ ಯಶಸ್ವಿ

ಮಂಜುನಾಥ ಅಂಗಡಿ

ಧಾರವಾಡ: ಕರ್ನಾಟಕ ಸಂಭ್ರಮ- ೫೦ರ ಅಂಗವಾಗಿ ಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು ರಾಷ್ಟಿçಯ ಸ್ಮಾರಕ ಟ್ರಸ್ಟ್ನಿಂದ ಇಲ್ಲಿನ ಸೃಜನಾ ರಂಗಮ0ದಿರದಲ್ಲಿ ಪಂ. ಬಸವರಾಜ ರಾಜಗುರು ಬದುಕಿನ ವೃತ್ತಾಂತದ ಸಂಗೀತ ನಾಟಕ ಮತ್ತು ತಬಲಾ ಸೋಲೋ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಆರಂಭದಲ್ಲಿ ಪುಣೆಯ ಪಂ. ರಾಮದಾಸ ಪಲಸುಲೆಯವರ ತಬಲಾ ಸೋಲೊ ಪ್ರೇಕ್ಷಕರಿಗೆ ಮುದ ನೀಡಿತು. ಪುಣೆಯ ಅಭಿಷೇಕ ಸೀನಕರ ಹಾರ್ಮೋನಿಯಂದ ಸಾಥ್ ನೀಡಿದರು. ನಂತರ ಪಂ. ರಾಮದಾಸ ಅವರು ಶಿಷ್ಯ ಹೇಮಂತ ಜೋಶಿಯನ್ನು ಕೂಡಿಸಿಕೊಂಡು ಅವರ ತಬಲಾ ಕೈಚಳಕವನ್ನು ಪರಿಚಯಿಸಿದರು.
ನಂತರ ರಂಗಸಜ್ಜಿಕೆಯಲ್ಲಿ ತೆರೆದುಕೊಂಡಿದ್ದು `ನಾ ರಾಜಗುರು' ಏಕವ್ಯಕ್ತಿ ಪ್ರಯೋಗ. ಪದ್ಮಭೂಷಣ ಪಂ. ರಾಜಗುರುಗಳ ಇಡೀ ಜೀವನದ ಘಟನಾವಳಿಗಳ ವೃತ್ತಾಂತವನ್ನು ಅವರ ಮೊಮ್ಮಗ, ನೀನಾಸಂ ಕಲಾವಿದ ವಿಶ್ವರಾಜ ದರ್ಶನ ಮಾಡಿಸಿದರು. ಸ್ವರಸಾಮ್ರಾಟರು ಬಾಲ್ಯದಲ್ಲಿ ಮಾಡುತ್ತಿದ್ದ ಚೇಷ್ಟೆಗಳನ್ನು ಅನುಕರಣೆ ಮಾಡುತ್ತ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.
ಕಲಾವಿದರಾದ ರಾಘವ ಕಮ್ಮಾರ ಹಾಗೂ ಜಯತೀರ್ಥ ಪಂಚಮುಖಿ ಹಾರ್ಮೋನಿಯಂ ಸಾಥ್ ನೀಡಿದರು.
ಪಂ. ಸೋಮನಾಥ ಮರಡೂರ, ಡಾ. ಗೋವಿಂದ ಮಣ್ಣೂರ, ಪ್ರೊ. ಐ.ಜಿ. ಸನದಿ, ಭಾರತಿದೇವಿ ರಾಜಗುರು, ನಿಜಗುಣ ರಾಜಗುರು, ಡಾ. ಉದಯಕುಮಾರ ದೇಸಾಯಿ, ಡಾ. ಜಿ.ಎಂ. ಹೆಗಡೆ, ಡಾ. ಮೃತುಂಜಯ ಅಗಡಿ, ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ, ಡಾ. ಶಾಂತಾರಾಮ ಹೆಗಡೆ, ಸುರೇಶ ಹಾಲಭಾವಿ, ಇತರ‍್ದಿದರು.
ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು.