ಜಿಲ್ಲೆ

ಅಧ್ಯಕ್ಷರಾಗಿ ಎನ್.ಟಿ.ಪುಟ್ಟಸ್ವಾಮಿ ಅವಿರೋಧ ಆಯ್ಕೆ

ಮದ್ದೂರು: ತಾಲೂಕಿನ ನಂಬಿನಾಯಕನಹಳ್ಳಿಯ ವಿಶ್ವೇಶ್ವರಯ್ಯ ಕೊಪ್ಪ ರೈತ ಉತ್ಪಾದಕರ ಕಂಪನಿಗೆ ನೂತನ ಅಧ್ಯಕ್ಷರಾಗಿ ಎನ್.ಟಿ.ಪುಟ್ಟಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾದರು.

ಎಚ್.ಎನ್.ರಮೇಶ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಂಘದ ಕಚೇರಿಯಲ್ಲಿ ನಡೆದ ಸರ್ವ ನಿರ್ದೇಶಕರು ಸಭೆಯಲ್ಲಿ ಎನ್.ಟಿ.ಪುಟ್ಟಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷ ಎನ್.ಟಿ.ಪುಟ್ಟಸ್ವಾಮಿ ಮಾತನಾಡಿ, ಕೊಪ್ಪ ರೈತ ಉತ್ಪಾದಕರ ಕಂಪನಿಯ ಸಮಗ್ರ ಅಭಿವೃದ್ದಿಗೆ ಸಂಘದ ಎಲ್ಲ ನಿರ್ದೇಶಕರ  ವಿಶ್ವಾಸ ಪಡೆದು ನಿರಂತರವಾಗಿ ಶ್ರಮಿಸುತ್ತೇನೆ ಮತ್ತು ಷೇರುದಾರರಿಗೆ ಸರ್ಕಾರದಿಂದ ಹಾಗೂ ಸಂಘದಿಂದ ದೊರಕುವ ಸಲವತ್ತುಗಳನ್ನು ಸಮರ್ಪಕವಾಗಿ ತಲುಪುವಂತೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ಸಂಘದ ಉಪಾಧ್ಯಕ್ಷ ಬಿ.ಸಿ.ದಿಲೀಪ್, ನಿರ್ದೇಶಕರಾದ ವರುಣ್, ಕರಿಯಪ್ಪ, ಟಿ.ಸಿ.ಮಂಜು, ನಾರಾಯಣಶೆಟ್ಟಿ, ಶಶಿಕಲಾ, ಶಿವಣ್ಣ, ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜು, ಸಿಇಒ ಸಿಂಧು ಇದ್ದರು.