ಜಿಲ್ಲೆ

'ಉತ್ತರ ಪ್ರದೇಶ ಕೊಲೆಗಡುಕರ ರಾಜ್ಯ, ಹೆಣ್ಣು ಮಕ್ಕಳನ್ನ ಫ್ರೀ ಪ್ರಾಡಕ್ಟ್​ ಅಂದುಕೊಂಡಿದ್ದಾರೆ'

ಚಾಮರಾಜನಗರ: ಉತ್ತರ ಪ್ರದೇಶ ಕೊಲೆಗಡುಕರ ರಾಜ್ಯವೆಂದು ಉಚ್ಛಾಟಿತ ಬಿಎಸ್​ಪಿ ಶಾಸಕ ಎನ್.ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಾಥರಸ್​ನ ಸಂತ್ರಸ್ತೆಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾರೆ. ಕೊಲೆಯಾದ ಜಾಗಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋಗಿ ಎನ್​ಕೌಂಟರ್ ಮಾಡುವಂತೆ ಮಹೇಶ್ ಒತ್ತಾಯಿಸಿದ್ದಾರೆ.

ಆಂಧ್ರ ಪ್ರದೇಶ ರೀತಿಯಲ್ಲೇ ಇವರಿಗೆ ಎನ್​ಕೌಂಟರ್ ಮಾಡಿ ಶಿಕ್ಷೆ ನೀಡಬೇಕು. ಈ ಘಟನೆಯನ್ನು ಇಡೀ ದೇಶ ನೋಡಬೇಕು. ಉತ್ತರ ಪ್ರದೇಶ ಕೊಲೆಗಡುಕ‌ರ ರಾಜ್ಯ. ಕೊಲೆಗಡುಕರು ತಪ್ಪಿಸಿಕೊಳ್ಳಲು ರಾಜ್ಯಭಾರ ನಡೆಸುತ್ತಿರುವವರೇ ಸಹಾಯ ನೀಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು.

ಯೋಗಿ ಆದಿತ್ಯನಾಥ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲಿ ಸಂಪೂರ್ಣ ವಿಫಲವಾಗಿದೆ. ಯುಪಿಯಲ್ಲಿ ಕಳೆದ ಒಂದು ವಾರದಲ್ಲಿ ಮೂವರು ದಲಿತ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಕೊಲೆಯಾಗಿದೆ. ಎನ್​ಕೌಂಟರ್ ಶಿಕ್ಷೆಯಿಂದ ಕೊಲೆಗಡುಕ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪನೆಯಾಗುತ್ತೆ ಎಂದರು.

ಉತ್ತರ ಪ್ರದೇಶದ ದಲಿತ ಹೆಣ್ಣು ಮಕ್ಕಳನ್ನು ಅಲ್ಲಿನ ಠಾಕೂರು ಮತ್ತು ಜಾಟರ್​ಗಳೂ ಫ್ರೀ ಪ್ರಾಡಕ್ಟ್ ಎಂದು ತಿಳಿದುಕೊಂಡಿದ್ದಾರೆ. ಇದನ್ನು ನಿಯಂತ್ರಿಸಬೇಕು. ಇಲ್ಲವಾದರೆ ಯುಪಿ ರಾಜಕಾರಣ ಉಲ್ಟಾ ಆಗುತ್ತದೆ ಎಂದು ಮಹೇಶ್ ಎಚ್ಚರಿಸಿದರು. (ದಿಗ್ವಿಜಯ ನ್ಯೂಸ್​)