ಬೆಂಗಳೂರು: ಮೈತ್ರೀ ಸಂಸ್ಕೃತ- ಸಂಸ್ಕೃತಿ ಪ್ರತಿಷ್ಠಾನವು ಅಕ್ಟೋಬರ್‌ನಲ್ಲಿ ಹಮ್ಮಿಕೊಂಡಿರುವ ಮೇಧಾನಮನಮ್ ಮತ್ತು ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಸಂಸ್ಕೃತದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಿದೆ.
ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜನೆಗೊಳ್ಳಿರುವ ಕಾರ್ಯಕ್ರಮದಲ್ಲಿ 2024ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂಸ್ಕೃತ ಭಾಷಾ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆದ 300 ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು. ಅರ್ಹರು ತಮ್ಮ ಅಂಕಪಟ್ಟಿಯ ನಕಲು ಪ್ರತಿಯ ಹಿಂಭಾಗದಲ್ಲಿ ತಮ್ಮ ಹೆಸರು, ವಾಟ್ಸ್‌ಆ್ಯಪ್ ಸಂಖ್ಯೆ, ಪಿನ್‌ಕೋಡ್ ಸಹಿತ ಅಂಚೆ ವಿಳಾಸ ದಾಖಲಿಸಿ ಆ. 15ರೊಳಗೆ ಕಳುಹಿಸಬೇಕು.
ವಿಳಾಸ: ಕೆ.ಎಂ. ಬದರೀನಾಥ್, ಸಂಚಾಲಕರು, ಮೈತ್ರೀ ಸಂಸ್ಕೃತ - ಸಂಸ್ಕೃತಿ ಪ್ರತಿಷ್ಠಾನ, ನಂ. 1732, 1ನೇ ಇ ಮೇನ್, ರಾಜಾಜಿನಗರ 1ನೇ ಹಂತ, ಬೆಂಗಳೂರು-10. ಮೆಟ್ರೋ ಪಿಲ್ಲರ್ 219ರ ಸಮೀಪ. ದೂ: 90196 30950 ಸಂಪರ್ಕಿಸಿ.