ಉಟಕನೂರಿನಲ್ಲಿ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಶಿವಯೋಗಿಗಳ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಮಠದ ಪಿಠಾಧಿಪತಿ ಮರಿಬಸವರಾಜ ಶ್ರೀಗಳು ಚಾಲನೆ ನೀಡಿದರು. ಮಠದ ಮಹಾಂತಲಿಂಗ ಶಿವಾಚಾರ್ಯರು, ಶರಭಯ್ಯ ಶಾಸ್ತ್ರಿ, ಮನೋಹರ ಗವಾಯಿ, ದೊಡ್ಡಬಸಯ್ಯ ಕುಂಬಾರ, ಬಸವಲಿಂಗಪ್ಪ ಸುಂಕನೂರು, ಅಮರಗುಂಡಪ್ಪ ಹೂಗಾರ ಇತರರಿದ್ದರು. 
ಜಿಲ್ಲೆ

ಪುರಾಣ ಕೇಳುವುದರಿಂದ ಮಾನಸಿಕ ನೆಮ್ಮದಿ

ನರೇಶ್ ಕುಮಾರ್

ಕವಿತಾಳ: ಸಮೀಪದ ಸುಕ್ಷೇತ್ರ ಉಟಕನೂರಿನಲ್ಲಿ ಶ್ರೀ ಮರಿಬಸವಲಿಂಗ ದೇಶೀಕೆಂದ್ರ ಶಿವಯೋಗಿಗಳ ಜಾತ್ರೋತ್ಸವ ನಿಮಿತ್ತ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಶಿವಯೋಗಿಗಳ ಪುರಾಣ ಕಾರ್ಯಕ್ರಮಕ್ಕೆ ಮಠದ ಪಿಠಾಧಿಪತಿ ಮರಿಬಸವರಾಜ ಶ್ರೀಗಳು ಚಾಲನೆ ನೀಡಿದರು.

ಮರಿಬಸವರಾಜ ಶ್ರೀಗಳು ಮಾತನಾಡಿ, ಜ.21ರವರೆಗೆ ಮರಿಬಸವಲಿಂಗ ಶ್ರೀಗಳ ಪುರಾಣ ಪ್ರವಚನ ನಡೆಯಲಿದ್ದು, ಭಕ್ತರು ಪಾಲ್ಗೊಂಡು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದರು. ಕರೇಗುಡ್ಡ ಮಹಾಂತೇಶ್ವರ ಮಠದ ಮಹಾಂತಲಿಂಗ ಶಿವಾಚಾರ್ಯರು, ಶರಭಯ್ಯ ಶಾಸ್ತ್ರಿ, ಮನೋಹರ ಗವಾಯಿ, ತಬಲ ವಾದಕ ಶಾಂತಯ್ಯಸ್ವಾಮಿ, ದೊಡ್ಡಬಸಯ್ಯ ಕುಂಬಾರ, ಬಸವಲಿಂಗಪ್ಪ ಸುಂಕನೂರು, ಅಮರಗುಂಡಪ್ಪ ಹೂಗಾರ ಇತರರಿದ್ದರು.