ಹನುಮಸಾಗರ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ 7ನೇ ವರ್ಷದ ಜಾತ್ರಾ ಮಹೋತ್ಸವ ನಿಮಿತ್ತ ಪ್ರಾರಂಭೋತ್ಸವಕ್ಕೆ ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಚಾಲನೆ ನೀಡಿದರು. ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಬಸವರಾಜ ಹಳ್ಳೂರ, ಮುಖಂಡರಾದ ಭರಮಪ್ಪ ಬಿಂಗಿ, ಸಕ್ರಪ್ಪ ಬಿಂಗಿ, ಧರ್ಮಣ್ಣ ಬಿಂಗಿ, ಡಾ.ಬಸವರಾಜ ಅಕ್ಕಿ, ಮರೇಗೌಡ ಬೋದುರ, ತಿಮ್ಮನಗೌಡ ಪೊಲೀಸ್‌ಪಾಟೀಲ್, ಚಂದಪ್ಪ ಅಕ್ಕಿ ಇತರರಿದ್ದರು. 
ಜಿಲ್ಲೆ

ಪುರಾಣ ಆಲಿಕೆಯಿಂದ ಮನಸ್ಸಿಗೆ ನೆಮ್ಮದಿ

ರುದ್ರಪ್ಪ ವಾಲಿ

ಹನುಮಸಾಗರ: ಪುರಾಣ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಹಳ್ಳೂರು ಹೇಳಿದರು.

ಪಟ್ಟಣದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ 7ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ನಿಮಿತ್ತ ಭಾನುವಾರ ಹಮ್ಮಿಕೊಂಡ ಶ್ರೀ ಗುಳೇದ ಗಾದಿಲಿಂಗೇಶ್ವರರ ಮಹಾಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರು ಧಾರಾವಾಹಿ ನೋಡುವ ಬದಲು ಪುರಾಣ ಕೇಳಬೇಕು. ಪುರಾಣ ಕೇಳುವುದರಿಂದ ಮನಸು ಪ್ರಶಾಂತವಾಗುತ್ತದೆ. ಮಕ್ಕಳು ಉತ್ತಮ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಪ್ರವಚನಕಾರ ಬಸವರಾಜ ದಟ್ಟಿ, ದೇವಸ್ಥಾನದ ಅರ್ಚಕ ಹೊನ್ನಪ್ಪ ಕಾಟಾಪೂರ, ಚನ್ನಬಸಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ನಾಗರಾಜ ಅಕ್ಕಿ, ಹನಮಂತಪ್ಪ ಅಕ್ಕಿ, ಕಾಳಪ್ಪ ಕುಷ್ಟಗಿ, ಚನ್ನಬಸಪ್ಪ ಹಕ್ಕಿ, ಶಂಕ್ರಪ್ಪ ಬಾಗಲಿ, ಹುಸೇನಸಾಬ ಕಲಾಲಬಂಡಿ, ಹುಲ್ಲಪ್ಪ ಗಡೇಕಾರ, ಭರಮಪ್ಪ ಕಂಡೇಕಾರ ಇತರರಿದ್ದರು.