ಹುಣಸೂರು ನಗರಸಭೆ ಪೌರಕಾರ್ಮಿಕರು, ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಯೋಗದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಎಂ.ಮಾನಸಾ, ಸೌಮ್ಯಾ, ಮಧುಸೂಧನ್, ಚಂದ್ರು ಇತರರಿದ್ದರು.  
ಮೈಸೂರು

ಆಟೋಟಗಳಲ್ಲಿ ಮಿಂದೆದ್ದ ಸ್ವಚ್ಛತಾ ಸೇನಾನಿಗಳು

ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಕ್ರೀಡಾಕೂಟ ಆಯೋಜನೆ

ಹುಣಸೂರು: ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ನಗರಸಭೆಯ ಪೌರಕಾರ್ಮಿಕರು, ಇತರ ಸ್ವಚ್ಛತಾ ಸಿಬ್ಬಂದಿ ಹಾಗೂ ಕಚೇರಿಯ ಸಿಬ್ಬಂದಿ ಪಾಲ್ಗೊಂಡು ಸಂಭ್ರಮಿಸಿದರು.

ನಗರಸಭೆಯ ಮುನೇಶ್ವರ ಕಾವಲ್ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಮಡಕೆ ಒಡೆಯುವುದು, ಪಾಸಿಂಗ್ ದ ಬಾಲ್, ಲೆಮನ್ ಆ್ಯಂಡ್ ಸ್ಪೂನ್, ಸಂಗೀತ ಕುರ್ಚಿ ಮುಂತಾದ ಆಟಗಳನ್ನು ಮಹಿಳೆಯರು, ಪುರುಷರು ಆಡಿ ಸಂತಸಪಟ್ಟರು. ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಕುರ್ಚಿಗಾಗಿ ಎದ್ದುಬಿದ್ದು ಓಡಿ ಗಿಟ್ಟಿಸಿಕೊಂಡರು.

ಪೌರಾಯುಕ್ತೆ ಎಂ.ಮಾನಸಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಅಧಿಕಾರಿಗಳು,ಸಿಬ್ಬಂದಿ ಎನ್ನುವ ಭೇದಭಾವ ತೋರದೆ ನಮ್ಮೆಲ್ಲರನ್ನೂ ಒಂದುಗೂಡಿಸುವ ವೇದಿಕೆಯಾಗಿ ಕ್ರೀಡಾಕೂಟ ನಡೆದಿದೆ ಎಂದರು.

ಪರಿಸರ ಇಂಜಿನಿಯರ್ ಸೌಮ್ಯಾ, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಚಂದ್ರು, ಕಿರಿಯ ಇಂಜಿನಿಯರ್ ಶಿವಕುಮಾರ್, ಹಿರಿಯ ಆರೋಗ್ಯ ನಿರೀಕ್ಷಕ ಶಶಿಕುಮಾರ್ ಹಾಗೂ ಲೋಕೇಶ್, ಕಂದಾಯ ನಿರೀಕ್ಷಕ ಮಧುಸೂದನ್ ಮತ್ತಿತರರಿದ್ದರು.

ವಿಜೇತರಿವರು: ಮಡಕೆ ಒಡೆಯುವುದು: ಜ್ಯೋತಿ(ಪ್ರಥಮ), ಕಿರಣ್(ದ್ವಿತೀಯ) ಮತ್ತು ವಿನೋದ್(ತೃತೀಯ)

ಬಾಂಬ್ ಇನ್ ದಿ ಸಿಟಿ: ಎಂ.ಸಚಿನ್(ಪ್ರಥಮ), ಎನ್.ಹೇಮಂತ್(ದ್ವಿತೀಯ) ಮತ್ತು ಎನ್.ಭರತ್(ತೃತೀಯ)

ಮ್ಯೂಸಿಕಲ್ ಚೇರ್: ಎಸ್.ಹರೀಶ್(ಪ್ರಥಮ), ಎಸ್.ದಿನೇಶ್(ದ್ವಿತೀಯ), ಎಸ್.ರಾಜ(ತೃತೀಯ)

ಪಾಸಿಂಗ್ ಬಾಲ್: ಪ್ರೇಮಾ(ಪ್ರಥಮ, ಮಂಜುಳಾ(ದ್ವಿತೀಯ), ಎಸ್.ಮಹದೇವ್(ತೃತೀಯ)

ಮಹಿಳೆಯರ ಲೆಮನ್ ಸ್ಪೂನ್: ಆರ್.ಜ್ಯೋತಿ(ಪ್ರಥಮ), ಸುಮಿತ್ರಾ(ದ್ವಿತೀಯ) ಸುಶೀಲಾ(ತೃತೀಯ)

ಕಚೇರಿ ಸಿಬ್ಬಂದಿಗಾಗಿ ಮ್ಯೂಸಿಕಲ್ ಚೇರ್: ಸುಗಂಧ(ಪ್ರಥಮ), ಅಭಿಷೇಕ್(ದ್ವಿತೀಯ) ಮತ್ತು ಶಶಿಕುಮಾರ್(ತೃತೀಯ).