ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನಂಜನಗೂಡು ನಗರದ ತಾಲೂಕು ಕಚೇರಿ ಮುಂಭಾಗ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಹಳೆಪುರ ರಾಜಶೇಖರ್, ಆರ್.ವಿ.ಮಹದೇವಸ್ವಾಮಿ, ಡಿ.ಎಸ್.ಆನಂದ, ಮಮತಾ, ಸುರೇಶ್, ಗಿರೀಶ್ ಇತರರು ಇದ್ದರು. 
ಮೈಸೂರು

ಹಾಲಿನ ದರ ಏರಿಕೆ ಖಂಡಿಸಿ ಪ್ರತಿಭಟನೆ

ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಆಕ್ರೋಶ

ನಂಜನಗೂಡು: ಹಾಲು ದರ ಸೇರಿದಂತೆ ದಿನಸಿ ಪದಾರ್ಥಗಳ ಬೆಲೆ ಏರಿಕೆ ವಿರುದ್ಧ ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ತಾಲೂಕು ಕಚೇರಿಯ ಮುಂಭಾಗದಲ್ಲಿ ಬುಧವಾರ ಜೆಡಿಎಸ್ ಕಾರ್ಯಕರ್ತರು ಜಮಾವಣೆಗೊಂಡು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಹಳೆಪುರ ರಾಜಶೇಖರ್ ಮಾತನಾಡಿ, ಈಗಾಗಲೇ ಬರಗಾಲದಿಂದ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಹಾಲಿನ ದರ ಏರಿಕೆ ಮಾಡಿದ್ದಾರೆ. ಜತೆಗೆ ಬಸ್ ಪ್ರಯಾಣ ದರ ಹೆಚ್ಚಿಸಿರುವುದರಿಂದ ಬಡ ಮಧ್ಯಮ ವರ್ಗದ ಜನರ ಮೇಲೆ ನೇರ ಪರಿಣಾಮ ಬೀರುತ್ತದೆ. ಸರ್ಕಾರದ ಅವೈಜ್ಞಾನಿಕ ನಡೆಯಿಂದ ಬಡಜನರ ಜೀವನ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಹೆಚ್ಚಿಸಿರುವ ಬೆಲೆಗಳನ್ನು ಇಳಿಸಬೇಕು ಎಂದರು.

ಬಸ್ ಪ್ರಯಾಣ ದರ ಏರಿಕೆ ಮಾಡಿರುವ ಕ್ರಮ ತಡೆ ಹಿಡಿಯಬೇಕು. ಜತೆಗೆ ಬರಪೀಡಿತ ರೈತರು ಮತ್ತು ಗ್ರಾಮೀಣ ಜನರಿಗೆ, ಜಾನುವಾರು ಸಾಕಣೆದಾರರಿಗೆ ವಿಶೇಷ ಬರ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು. ಬಳಿಕ ಉಪ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ನಿಕಟ ಪೂರ್ವ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ವಿ.ಮಹದೇವಸ್ವಾಮಿ, ಜೆಡಿಎಸ್ ಕಾರ್ಯಧ್ಯಕ್ಷ ಡಿ.ಎಸ್.ಆನಂದ, ರಾಜ್ಯ ಉಪಾಧ್ಯಕ್ಷೆ ಮಮತಾ, ಮುಖಂಡರಾದ ಸುರೇಶ್, ಗಿರೀಶ್, ಶಿವಕುಮಾರ್, ಮಂಜು, ನಾಗೇಶ, ಮಹದೇವ ಶೆಟ್ಟಿ, ಚೇತನ್, ಕೃಷ್ಣಶೆಟ್ಟಿ, ಮಾದಶೆಟ್ಟಿ, ಪ್ರಕಾಶ್, ರಾಜಣ್ಣ, ಚೆನ್ನಾಜಮ್ಮ, ರೋಜಾ, ಕೃಷ್ಣ, ಮಹದೇವಪ್ಪ ಇತರರು ಇದ್ದರು.

==================

ಫೋಟೋ