ಕನಕದಾಸರ ಜಯಂತಿ ಅಂಗವಾಗಿ ಸೋಸಲೆ ವ್ಯಾಸರಾಜರ ಮಠದ ವತಿಯಿಂದ ವ್ಯಾಸರಾಜಪುರದ ಕನಕ ಸನ್ನಿಧಾನದಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. 
ಮೈಸೂರು

ಸೋಸಲೆ ವ್ಯಾಸರಾಜರ ಮಠದಲ್ಲಿ ಕನಕ ಜಯಂತಿ

ವ್ಯಾಸರಾಜಪುರದಲ್ಲಿರುವ ಶ್ರೀ ಮುಖ್ಯ ಪ್ರಾಣದೇವರ

ತಿ.ನರಸೀಪುರ: ಶ್ರೀ ಕನಕದಾಸರ ಜಯಂತಿ ಅಂಗವಾಗಿ ವ್ಯಾಸರಾಜಪುರದಲ್ಲಿರುವ ಶ್ರೀ ಮುಖ್ಯ ಪ್ರಾಣದೇವರ ಹಾಗೂ ಶ್ರೀ ಕನಕದಾಸರ ವಿಗ್ರಹಗಳಿಗೆ ಸೋಸಲೆ ವ್ಯಾಸರಾಜರ ಮಠದ ವತಿಯಿಂದ ಪಂಚಾಮೃತ ಅಭಿಷೇಕ, ಜಲಾಭಿಷೇಕ, ಅಲಂಕಾರ ನೆರವೇರಿತು.

ಶ್ರೀ ವ್ಯಾಸರಾಜ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಕಲ ಕಾರ್ಯಗಳನ್ನು ನೆರವೇರಿಸಿದರು. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ವಿದ್ವಾನ್ ಶ್ರೀ ಚಂದ್ರು ದೇವರ ನಾಮಗಳನ್ನು ಪ್ರಸ್ತುತಪಡಿಸಿದರು.

ಬನ್ನೂರು ಶ್ರೀ ವ್ಯಾಸರಾಜ ಮಠದ ವ್ಯವಸ್ಥಾಪಕ ಪಂಡಿತ್ ಗುರುರಾಜ್, ವಕೀಲ ವಿಜಯೇಂದ್ರ ಇತರರಿದ್ದರು.