ಎಚ್.ಡಿ.ಕೋಟೆ: ತಾಲೂಕಿನಲ್ಲಿ ಪೀಪಲ್ ಟ್ರೀ ಸಂಸ್ಥೆ ಆದಿವಾಸಿಗಳ ಶೈಕ್ಷಣಿಕ ಪ್ರಗತಿ, ಆರ್ಥಿಕ ಅಭಿವೃದ್ಧಿಗೆ ಮುತುವರ್ಜಿಯಿಂದ ಕೆಲಸ ಮಾಡುತ್ತಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಪೀಪಲ್ ಟ್ರೀ ವತಿಯಿಂದ ಶುಕ್ರವಾರ ಆಯೋಜಿಸಿದ್ದ ವಿಶ್ವ ರೈತ ಮಹಿಳಾ ದಿನಾಚರಣೆ ಹಾಗೂ ಪೀಪಲ್ ಟ್ರೀ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಪೂರ್ವಿಕರು ಹಿಂದೆ ಬಳಸುತ್ತಿದ್ದ ಸಿರಿಧಾನ್ಯಗಳಾದ ನವಣೆ, ಅರಕ, ಬರಗು, ಉದ್ದು, ಜೋಳ, ಗೆಡ್ಡೆ ಗೆಣಸು ಮತ್ತಿತರ ನೂರಾರು ಬಗೆಯ ಆರೋಗ್ಯ ಬಲವರ್ಧನೆಗೆ ಬೇಕಾದ ಆಹಾರ ಧಾನ್ಯಗಳನ್ನು ಪೀಪಲ್ ಟ್ರೀ ಸಂಸ್ಥೆ ಸಂಗ್ರಹಿಸಿ ರೈತರಿಗೆ ಉತ್ತೇಜನ ನೀಡಿ ಹಿಂದಿನ ಕಾಲದ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡುತ್ತಾ ರೈತರಿಗೆ ಜೀವನಾಡಿಯಾಗಿ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ಭವನದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ನೈಸರ್ಗಿಕ ಹಾಗೂ ಪಾರಂಪರಿಕ ಆಹಾರ ಪದ್ಧತಿಯ ಕೃಷಿ ಬಿತ್ತನೆ ಬೀಜಗಳ ವಸ್ತು ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಲಾಯಿತು. ಭಾಗವಹಿಸಿದ್ದ ಮಹಿಳೆಯರಿಗೆ ತೆಂಗಿನ ಗಿಡಗಳನ್ನು ವಿತರಿಸಿದರು. ಇಒ ರವಿಚಂದ್ರ, ಕೃಷಿ ಸಂಶೋಧಕ ಚೆನ್ನರಾಜು, ವಡ್ಡರಗುಡಿ ಚಿಕ್ಕಣ್ಣ, ವಿಜಯಕುಮಾರ್, ಅಕ್ಬರ್ ಪಾಷ, ಡಾ.ರವಿಕುಮಾರ್, ಲತಾ, ಪ್ರಗತಿಪರ ಆದಿವಾಸಿ ರೈತ ಮಹಿಳೆ ಪುಟ್ಟಮ್ಮ ಮೊತ್ತ, ಮೈಸೂರು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಮಲ್ಲಿಕ್, ಡಾ.ಪ್ರಸ್ಸಿಲ್ಲ ಸತ್ಯನಾಥ್, ಡೋಮೇನಿಕ್, ವನ್ಯಜೀವಿ ಮಂಡಳಿ ಸದಸ್ಯ ಚಿಕ್ಕಣ್ಣ, ಬಿಕೆಎಸ್ ವಿಜಯಕುಮಾರ್, ರಾಜ ಹುಣಸೂರು, ಡಾ.ರವಿಕುಮಾರ್, ಅಕ್ಬರ್ ಪಾಷ, ಡಾ.ಮರಿದೇವಯ್ಯ, ಸುಮಿತ್ರಾ, ಜವರೇಗೌಡ, ಸುರೇಶ್, ಲತಾ, ಚೆನ್ನರಾಜು, ಚೆನ್ನಬಸಪ್ಪ, ಎಲಿಜಬೆತ್, ಶಿವಮ್ಮ, ಕುಮಾರಿ, ಮಹೇಶ್, ಮಂಜು, ರೇಖಾ, ಸಂಜೀವ್ ಶೆಟ್ಟಿ, ಇಂದ್ರಮ್ಮ, ಜ್ಯೋತಿ, ಕನಕ ಸುಂದರಿ, ಕಾರಯ್ಯ ಭಾಗವಹಿಸಿದ್ದರು.