ತಿರುಮಕೂಡಲಿನ ಶ್ರೀ ವ್ಯಾಸರಾಜರ ಮಠದಲ್ಲಿ ಶನಿವಾರ ಸೋಸಲೆ ಪರಂಪರೆಯ 31ನೇ ಪೀಠಾಧಿಪತಿ ಶ್ರೀ ವಿದ್ಯಾವಾಚಸ್ಪತಿ ತೀರ್ಥ ಸ್ವಾಮೀಜಿ ಆರಾಧನಾ ಮಹೋತ್ಸವದ ಅಂಗವಾಗಿ ಅವರ ಮೂಲವೃಂದಾವನದ ವಿಶೇಷ ಅಲಂಕಾರ ಮಾಡಲಾಗಿತ್ತು.  Aradhana of Sri Vidyavachaspati Teertha Swamiji
ಮೈಸೂರು

ಶ್ರೀ ವಿದ್ಯಾವಾಚಸ್ಪತಿ ತೀರ್ಥ ಸ್ವಾಮೀಜಿಗಳ ಆರಾಧನೆ

Aradhana of Sri Vidyavachaspati Teertha Swamiji

ತಿ.ನರಸೀಪುರ : ಶ್ರೀ ಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ಸೋಸಲೆ ವ್ಯಾಸರಾಜರ ಮಠದ ಭವ್ಯ ಯತಿ ಪರಂಪರೆಯ 31ನೇ ಪೀಠಾಧಿಪತಿಗಳಾಗಿದ್ದ ಶ್ರೀ ವಿದ್ಯಾವಾಚಸ್ಪತಿ ತೀರ್ಥ ಮಹಾ ಸ್ವಾಮೀಜಿ ಅವರ 19ನೇ ಆರಾಧನಾ ಮಹೋತ್ಸವವು ಸಮೀಪದ ತಿರುಮಕೂಡಲಿನ ಮೂಲವೃಂದಾವನದ ಸನ್ನಿಧಿಯಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು.

1997ರಿಂದ 2007ರ ವರೆಗೆ ಸಂಸ್ಥಾನದ ಪೀಠಾಧಿಪತಿಗಳಾಗಿದ್ದ ಅವರು ನಾಮಧೇಯಕ್ಕೆ ತಕ್ಕಂತೆ ಅಪಾರ ವಿದ್ಯೆ, ಅಪ್ರತಿಮ ಪಾಂಡಿತ್ಯ ಹೊಂದಿದ್ದರು. ಶ್ರೀಗಳು ಭಾಗವತ ಉಪನ್ಯಾಸಕ್ಕೆ ಸುಪ್ರಸಿದ್ಧರಾಗಿದ್ದರು. ಹಲವು ಭಾಷೆಗಳನ್ನು ತಿಳಿದಿದ್ದ ವಿದ್ಯಾವಾಚಸ್ಪತಿ ತೀರ್ಥರು ಕನ್ನಡ, ಹಿಂದಿ, ತಮಿಳು, ತೆಲುಗು ಇತರ ಭಾರತೀಯ ಭಾಷೆಗಳಲ್ಲಿ ದೇಶಾದ್ಯಂತ ವಿಶೇಷ ಪ್ರವಚನ, ಉಪದೇಶಾಮೃತ ನೀಡುತ್ತಿದ್ದರು ಎಂದು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ಗುರುಗಳ 20ನೇ ವರ್ಷದ ಆರಾಧನಾ ಉತ್ಸವದ ನಿಮಿತ್ತವಾಗಿ ಮೂಲ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಪೂಜೆ ನೆರವೇರಿತು. ರಾಜ್ಯದ ವಿವಿಧ ಭಾಗದ ನೂರಾರು ಭಕ್ತರು ಆಗಮಿಸಿ ವೃಂದಾವನ ದರ್ಶನ ಪಡೆದರು. ನಂತರ ಅನ್ನಸಂತರ್ಪಣೆ ಮಾಡಲಾಯಿತು. ಮಠದ ವ್ಯವಸ್ಥಾಪಕ ಶ್ರೀಧರ ಮತ್ತು ಇತರರು ಇದ್ದರು.