ತಿ.ನರಸೀಪುರ: ಅಕ್ಷರ ದಾಸೋಹ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸುವ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಆದರ್ಶ ಮತ್ತು ಸೇವಾ ಕಾರ್ಯಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ವಾಟಾಳು ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ವಿವೇಕಾನಂದ ನಗರದಲ್ಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಭಾ ಭವನದಲ್ಲಿ ಇತ್ತೀಚೆಗೆ ಮಹಾಸಭಾ ತಾಲೂಕು ಘಟಕದಿಂದ ಆಯೋಜಿಸಿದ್ದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು 111ನೇ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ರಾಜೇಂದ್ರ ಶ್ರೀಗಳು ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಸಾಧನ ಎಂಬುದನ್ನು ಅರಿತುಕೊಂಡು ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿದ್ದರು ಎಂದರು.
ಗ್ರಾಮೀಣ ಭಾಗದ ಬಡವರು, ಮಧ್ಯಮ ವರ್ಗದ ಮಕ್ಕಳಿಗೂ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಸುತ್ತೂರು ಮಠದಲ್ಲಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದರು. ಅವರ ಸೇವಾ ಚಿಂತನೆಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ಸಮಾಜದ ಎಲ್ಲ ವರ್ಗಗಳ ಜನರ ಬದುಕಿನ ಸುಧಾರಣೆ ಒಳಗೊಂಡಿದ್ದವು ಎಂದು ನುಡಿದರು.
ಮಹಾಸಭಾ ತಾಲೂಕು ಅಧ್ಯಕ್ಷ ಸಿ.ಎಂ.ಪ್ರಕಾಶ್, ಶ್ರೀ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಬಿಲಿಗೆರೆಹುಂಡಿ ಗುರು ಸ್ವಾಮೀಜಿ, ಸೇತುವೆ ಮಠದ ಸಹಜಾನಂದ ಶ್ರೀಗಳು, ಮಹಾಸಭಾ ಉಪಾಧ್ಯಕ್ಷ ಬಿ.ಎಂ.ಶಿವಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಕೆ.ವಿ.ಶಿವಶಂಕರ್, ಖಜಾಂಚಿ ಜಿ. ನಂಜುಂಡಸ್ವಾಮಿ, ಮಲ್ಲಪ್ಪ, ಯುವ ಘಟಕದ ಅಧ್ಯಕ್ಷ ಕೆ.ಎನ್.ಅಶೋಕ್, ಮಹಿಳಾ ಘಟಕದ ಅಧ್ಯಕ್ಷೆ ರೂಪಶ್ರೀ ಪರಮೇಶ್, ನಿರ್ದೇಶಕರಾದ ಪಿ.ಕುಮಾರ್, ಕೆ.ಎಂ.ಮಲ್ಲು, ಮುಖಂಡರಾದ ಬಿ.ವೀರಭದ್ರಪ್ಪ, ಹಿರಿಯೂರು ಶಿವಕುಮಾರ್, ಎಸ್.ಬಿ.ಸುಗಂಧರಾಜು, ಶಂಭುದೇವನಪುರ ರಮೇಶ್, ಡಿ.ಎಲ್.ಮಹದೇವಪ್ಪ, ಮೂಗೂರು ಭಾಗ್ಯಮ್ಮ, ಮಲ್ಲಣ್ಣ, ತೊಟ್ಟವಾಡಿ ರವಿ, ಸೋಮಶೇಖರಪ್ಪ, ಮೂಗೂರು ಕುಮಾರಸ್ವಾಮಿ, ಪರಮೇಶ್ ಪಟೇಲ್, ಸಾಲೂರು ಸ್ವಾಮಿ, ಕುಮಾರಸ್ವಾಮಿ, ಬಿ.ಎಂ.ಶಿವಕುಮಾರ್, ಕುರುಬೂರು ಮಂಜುನಾಥ್ ಇದ್ದರು.