ಪಿರಿಯಾಪಟ್ಟಣ ತಾಲೂಕು ವಾಕೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶೂ ಹಾಗೂ ಸಾಕ್ಸ್‌ಗಳನ್ನು ವಿತರಿಸಲಾಯಿತು. ಮುಖ್ಯಶಿಕ್ಷಕ ಭಾಸ್ಕರ್, ಸಹ ಶಿಕ್ಷಕರಾದ ನಾಗೇಶ್, ಧರ್ಮೇಶ್, ಕಾಂತರಾಜ್, ಎಸ್‌ಡಿಎಂಸಿ ಅಧ್ಯಕ್ಷ ಮಂಜು ಇದ್ದರು. Distribution of shoes and socks to students
ಮೈಸೂರು

ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಣೆ

Distribution of shoes and socks to students

ಪಿರಿಯಾಪಟ್ಟಣ: ತಾಲೂಕಿನ ವಾಕೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಸರಬರಾಜಾದ ಉಚಿತ ಶೂ ಹಾಗೂ ಸಾಕ್ಸ್‌ಗಳನ್ನು ಶಾಲಾ ಆವರಣದಲ್ಲಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕ ಭಾಸ್ಕರ್, ಸಹ ಶಿಕ್ಷಕರಾದ ನಾಗೇಶ್, ಧರ್ಮೇಶ್, ಕಾಂತರಾಜ್, ಎಸ್‌ಡಿಎಂಸಿ ಅಧ್ಯಕ್ಷ ಮಂಜು, ಸದಸ್ಯ ನಾಗೇಶ್ ಹಾಜರಿದ್ದರು. ಹೊಸ ಶೂ ಮತ್ತು ಸಾಕ್ಸ್ ಪಡೆದುಕೊಂಡ ಶಾಲಾ ಮಕ್ಕಳು ಸಂತಸ ವ್ಯಕ್ತಪಡಿಸಿದರು. ಶಾಲಾ ಸಿಬ್ಬಂದಿ ಹಾಗೂ ಗ್ರಾಮದ ಪ್ರಮುಖರು ಹಾಜರಿದ್ದರು.