ಹುಣಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಸತತವಾಗಿ 25 ವರ್ಷಗಳ ಕಾಲ ಸಾರ್ವಜನಿಕ ಹುದ್ದೆಯನ್ನು ನಿರ್ವಹಿಸುತ್ತಿರುವುದರ ಸಂಕೇತವಾಗಿ ಬಿಜೆಪಿ ತಾಲೂಕು ಘಟಕದಿಂದ ಸೇವಾ ಜ್ಯೋತಿ ಯಾತ್ರೆ ನಡೆಸುವ ಮೂಲಕ ಕಾರ್ಯಕರ್ತರು ಸಂಭ್ರಮಿಸಿದರು.
ಮೈಸೂರಿನಿಂದ ಬಂದ ಜ್ಯೋತಿಯನ್ನು ನಗರದ ಅರಸು ಪುತ್ಥಳಿ ವೃತ್ತದ ಬಳಿ ಬರಮಾಡಿಕೊಂಡ ಕಾರ್ಯಕರ್ತರು ಸೇವಾ ಜ್ಯೋತಿಯೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಂವಿಧಾನ ವೃತ್ತ ತಲುಪಿದರು.
ಬಿಜೆಪಿ ತಾಲೂಕು ಗ್ರಾಮಾಂತರ ಅಧ್ಯಕ್ಷ ಕಾಂತರಾಜು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ, ಹಿತವನ್ನೇ ತಮ್ಮ ಉಸಿರನ್ನಾಗಿಸಿಕೊಂಡು ವಿಕಸಿತ ಭಾರತದ ಕನಸನ್ನು ನನಸಾಗಿಸಲು ಹೆಜ್ಜೆ ಇಟ್ಟು ಅದಕ್ಕೆ ಅವಶ್ಯವಾದ ಅಗತ್ಯ ಯೋಜನೆಗಳನ್ನು ರೂಪಿಸಿದ್ದಾರೆ. ಭಾರತ ಆರ್ಥಿಕ ಸ್ಥಿತಿಯಲ್ಲಿ ವಿಶ್ವದ ನಾಲ್ಕನೇ ದೇಶವಾಗಿ ಹೊರಹೊಮ್ಮಿದ್ದರೆ ಅದಕ್ಕೆ ಭ್ರಷ್ಟಾಚಾರ ರಹಿತ ಆಡಳಿತವೇ ಕಾರಣ ಎಂದರು.
ಜಿಲ್ಲಾ ಉಪಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ಮಾತನಾಡಿ, ದೇಶದ ಪ್ರತಿ ಕುಟುಂಬ ಕೇಂದ್ರ ಸರ್ಕಾರದ ಒಂದಲ್ಲ ಒಂದು ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದರೆ ಪ್ರಧಾನಿ ಮೋದಿ ಅವರ ಆಡಳಿತದ ಪ್ರಭಾವವನ್ನು ತಿಳಿಯಬಹುದಾಗಿದೆ ಎಂದರು.
ನಗರ ಮಂಡಲ ಅಧ್ಯಕ್ಷ ಟಿ.ಡಿ.ನಾರಾಯಣ್, ರೈತಮೋರ್ಚಾ ತಾಲೂಕು ಅಧ್ಯಕ್ಷ ಬಿಳಿಕೆರೆ ಪ್ರಸನ್ನ, ಮುಖಂಡರಾದ ದೇವರಹಳ್ಳಿ ಸೋಮಶೇಖರ್, ನಾಗರಾಜ್ ಮಲ್ನಾಡಿ, ಹನಗೋಡು ಮಂಜುನಾಥ, ಪ್ರಧಾನ ಕಾರ್ಯದರ್ಶಿ ಸುರೇಶ್, ನಟರಾಜ್, ಸತೀಶ್, ಯುವ ಮೋರ್ಚಾ ಅಧ್ಯಕ್ಷ ರಾಘವೇಂದ್ರ, ಅರುಣ್ ಚವಾಣ್, ಮಹಿಳಾ ಘಟಕದ ಅಧ್ಯಕ್ಷೆ ಯಶೋದಮ್ಮ, ನಿಕಟಪೂರ್ವ ಅಧ್ಯಕ್ಷೆ ಕಮಲಮ್ಮ, ಜಿಲ್ಲಾ ಸಮಿತಿ ಸದಸ್ಯೆ ವೆಂಕಟಮ್ಮ, ಸವಿತಾ ಚವಾಣ್, ಮಂಜುಳಾ ಪುಷ್ಪಾ, ಕಾರ್ಯಕರ್ತರು ಹಾಜರಿದ್ದರು.