ಕಂಪ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಿಯಾಪಟ್ಟಣ ರೋಟರಿ ಮಿಡ್ ಟೌನ್ ವತಿಯಿಂದ ಪೀಠೋಪಕರಣಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಮೈಸೂರು ಮುಡಾ ಮಾಜಿ ಅಧ್ಯಕ್ಷ ರೊ.ಯಶಸ್ವಿ ಎಸ್.ಸೋಮಶೇಖರ್, ರೋಟರಿ ಮಿಡ್ ಟೌನ್ ಅಧ್ಯಕ್ಷ ಬಲರಾಮ್, ಮಾಜಿ ಅಧ್ಯಕ್ಷ ಸತ್ಯನಾರಾಯಣ, ಮುಖ್ಯಶಿಕ್ಷಕಿ ಮೀನಾ ಮತ್ತಿತರರು ಇದ್ದರು.  
ಮೈಸೂರು

ರೋಟರಿ ಮಿಡ್ ಟೌನ್‌ನಿಂದ ಶಾಲೆಗೆ ಪೀಠೋಪಕರಣಗಳ ಕೊಡುಗೆ

ಕಂಪಲಾಪುರಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ದತ್ತು ಪಡೆದಿದ್ದು ಸಾಂಕೇತಿಕವಾಗಿ ಪೀಠೋಪಕರಣಗಳ ಹಸ್ತಾಂತರ ಮಾಡಲಾಯಿತು.

ಮೈಸೂರಿನ ರೋಟರಿ ನಿಯೋಜಿತ ಜಿಲ್ಲಾ ಪ್ರಾಂತಪಾಲರೂ ಆದ ಉದ್ಯಮಿ ಯಶಸ್ವಿ ಎಸ್.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೋಟರಿ ಎಂದರೆ ಅದೊಂದು ಸೇವಾ ಸಂಸ್ಥೆ. ಸಮಾಜಮುಖಿಯಾಗಿ ಶಾಶ್ವತವಾಗಿ ಉಳಿಯುವಂತ ಕೆಲಸಗಳನ್ನ ಮಾಡುವುದೇ ಇದರ ಸದುದ್ದೇಶ. ಅದರಲ್ಲೂ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಇಲ್ಲಿ ಕೊಡುವವರಿಗೆ ಉತ್ತೇಜನ ಸಿಕ್ಕರೆ ಪಡೆದುಕೊಳ್ಳುವವರಿಗೆ ನೆಮ್ಮದಿ ಸಿಗಲಿದೆ. ಅದೇ ರೋಟರಿಯ ಕಾಯಕ. ಇಡೀ ದೇಶದಲ್ಲಿ ಮಾರಕವಾಗಿದ್ದ ಪೋಲಿಯೋವನ್ನು ಮುಕ್ತವಾಗಿಸಲು ರೋಟರಿ ಸಂಸ್ಥೆ ಪಾತ್ರ ಮಹತ್ತರವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಶಾಲೆಯನ್ನು ದತ್ತು ತೆಗೆದುಕೊಂಡು ಇಂದಿನಿಂದಲೇ ಅಭಿವೃದ್ಧಿಪಡಿಸಲು ಸಜ್ಜಾಗಿ, ಇದಕ್ಕೆ ನಾನು ಕೈಜೋಡಿಸುತ್ತೇನೆ ಎಂದು ತಿಳಿಸಿದರು.

ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ಅಧ್ಯಕ್ಷ ಬಲರಾಮ್ ಮಾತನಾಡಿ, ನಮ್ಮ ಸ್ವಾರ್ಥವನ್ನು ಬದಿಗೊತ್ತಿ ಸಮಾಜಮುಖಿ ಸಾರ್ಥಕ ಸೇವೆಗಳನ್ನು ಮಾಡಲು ಸನ್ನದ್ಧರಾಗಬೇಕು. ಶಾಶ್ವತವಾದದ್ದನ್ನ ಸೃಷ್ಟಿಸುವುದೇ ರೋಟರಿಯ ಮುಖ್ಯ ಧ್ಯೇಯ ಎಂದರು.

ರೋಟರಿ ಮಿಡ್ ಟೌನ್ ಮಾಜಿ ಅಧ್ಯಕ್ಷ ಸತ್ಯನಾರಾಯಣ್, ರೊ. ಬಿ.ಎಸ್.ಹರೀಶ್, ರೊ.ರವಿಶಂಕರ್, ರೊ.ವಿನಯ್ ಶೇಖರ್, ರೊ.ನಾಗರಾಜ್, ರೊ.ಕುಲದೀಪ್, ರೊ.ಸೂರ್ಯ, ರೊ.ಚಂದ್ರು, ರೊ.ಸತೀಶ್, ರೊ.ಭರತ್, ಶಾಲೆಯ ಮುಖ್ಯಶಿಕ್ಷಕಿ ಮೀನಾ, ಆಶಾಲತಾ, ಸುಷ್ಮಾ, ಆಶಾ ರಾಣಿ, ಶಿವು ಹಾಜರಿದ್ದರು.