ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿ ಯುವ ಸಂಭ್ರಮ ಕಾರ್ಯಕ್ರಮದ ಶೀರ್ಷಿಕೆ ಗೀತೆಗೆ ನೃತ್ಯ ಪ್ರದರ್ಶಿಸಿದ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು Filming of the 'Yuva Sambhrama' title song
ಮೈಸೂರು

ಯುವ ಸಂಭ್ರಮ ಶೀರ್ಷಿಕೆ ಗೀತೆ ಚಿತ್ರೀಕರಣ

28ರಿಂದ ಆರಂಭವಾಗುವ ದಸರಾ ಮೊದಲ ಕಾರ್ಯಕ್ರಮ

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ಸೆ.28ರಿಂದ ಆರಂಭವಾಗಲಿರುವ ‘ಯುವ ಸಂಭ್ರಮ’ ಕಾರ್ಯಕ್ರಮದ ಶೀರ್ಷಿಕೆ ಗೀತೆಗೆ ವಿವಿಧ ಕಾಲೇಜುಗಳ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ನೃತ್ಯ ಮಾಡುವ ಮೂಲಕ ಗಮನ ಸೆಳೆದರು.

ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮವಾದ ಯುವ ಸಂಭ್ರಮ ಕಾರ್ಯಕ್ರಮಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೈಸೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ ಸೋಮಶೇಖರ್ ಜಿಗಿಣಿ ಹಾಗೂ ತಂಡದ ಸದಸ್ಯರು ಯುವ ಸಂಭ್ರಮ ಕಾರ್ಯಕ್ರಮಕ್ಕೆ ಶೀರ್ಷಿಕೆ ಗೀತೆಯೊಂದನ್ನು ರಚಿಸಿದ್ದು, ಹಿನ್ನೆಲೆ ಗಾಯಕ ಗುರುಕಿರಣ್, ಗಾಯಕಿ ಅನನ್ಯ ಭಟ್ ಹಾಡಿದ್ದಾರೆ.

ಈ ಶೀರ್ಷಿಕೆ ಗೀತೆಗೆ ವಿಡಿಯೋ ಚೀತ್ರಕರಣ ಮಾಡುತ್ತಿದ್ದು, ಡಾನ್ಸ್ ಮಾಸ್ಟರ್, ನೃತ್ಯ ಸಂಯೋಜಕ ವಿಶ್ವಾಸ್ ಎಂಬುವರು ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ವಾಣಿವಿಲಾಸ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ನ್ಯತ್ಯ ಮಾಡಿಸಿ ಚಿತ್ರೀಕರಿಸಲಾಗಿದೆ.

ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಕುಕ್ಕರಹಳ್ಳಿ ಕೆರೆ ಆವರಣ, ಬಯಲುರಂಗಮಂದಿರ ಸೇರಿದಂತೆ ಸಾಹಿತ್ಯಕ್ಕೆ ಅನುಗುಣವಾಗಿ ವಿವಿಧ ಪಾರಂಪರಿಕ ಕಟ್ಟಡಗಳ ಮುಂದೆ ಭರತನಾಟ್ಯ ಸೇರಿದಂತೆ ವಿವಿಧ ಕಲಾಪ್ರಕಾರಗಳನ್ನು ಪ್ರದರ್ಶನ ಸೆರೆ ಹಿಡಿಯಲಾಯಿತು. ಈ ಆಲ್ಬಮ್ ಗೀತೆ ಸೆ.24ರಂದು ಬಿಡುಗಡೆಯಾಗಲಿದೆ.