ಕಂಬಳ Mysuru Dasara: Kambala registration begins
ಮೈಸೂರು

ಮೈಸೂರು ದಸರಾ: ಕಂಬಳದ ನೋಂದಣಿ ಶುರು

ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆನ್‌ಲೈನ್ ಪೋರ್ಟಲ್ ಅರ್ಜಿ ಹಾಗೂ ಪ್ರವೇಶಾತಿ ಸಲ್ಲಿಸಲು ಸೆ.30 ಕೊನೆಯ ದಿನ

ಮೈಸೂರು: ಮೈಸೂರು ದಸರಾ ಅಂಗವಾಗಿ ಇದೇ ಮೊದಲ ಬಾರಿಗೆ ಕರಾವಳಿಯ ಜಾನಪದ ಕ್ರೀಡೆಯಾದ ದಸರಾ ಕಂಬಳವನ್ನು ಅದ್ದೂರಿಯಾಗಿ ಆಯೋಜಿಸಲಾಗುತ್ತಿದೆ.

ಈ ಐತಿಹಾಸಿಕ ಕ್ರೀಡಾಕೂಟದ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆನ್‌ಲೈನ್ ಪೋರ್ಟಲ್ ಅನ್ನು ಅಧಿಕೃತವಾಗಿ ತೆರೆಯಲಾಗಿದೆ.

ಈ ಬಾರಿಯ ದಸರಾದ ಮುಖ್ಯ ಆಕರ್ಷಣೆಯಾಗಿ ಕಂಬಳವು ನಗರದ ಸಾತಗಳ್ಳಿ ಹೊರವರ್ತುಲ ರಸ್ತೆಯಲ್ಲಿ ವಿಟಿಯು ಪ್ರಾದೇಶಿಕ ಕ್ಯಾಂಪಸ್ ಬಳಿ ಏರ್ಪಡಿಸಲಾಗಿದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವ ಕಂಬಳದ ಕೋಣಗಳ ಮಾಲೀಕರು ಮತ್ತು ಓಡಿಸುವ ಜಾನಪದ ವೀರರು ವಿವಿಧ ಸ್ಪರ್ಧಾ ವಿಭಾಗಗಳಡಿ ಹೆಸರು ನೋಂದಾಯಿಸಿಕೊಳ್ಳಬಹುದು.

ಆಸಕ್ತರು ವಿವರಗಳಿಗಾಗಿ ಮತ್ತು ತಕ್ಷಣದ ನೋಂದಣಿಗಾಗಿ https://kambala.milieumedia.in ಜಾಲತಾಣಕ್ಕೆ ನೀಡಬಹುದು. ಅರ್ಜಿ ಹಾಗೂ ಪ್ರವೇಶಾತಿಗಳನ್ನು ಸಲ್ಲಿಸಲು ಸೆ.30 ಕೊನೆಯ ದಿನ.

ಆಪ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸುವವರು ಭೌತಿಕ ಪ್ರತಿಯನ್ನು ಜಿಲ್ಲಾ ಪಂಚಾಯಿತಿ ಕಚೇರಿಯಿಂದ ಪಡೆದುಕೊಳ್ಳಬಹುದು ಎಂದು ಕಂಬಳ ಉಪ ಸಮಿತಿಯ ಕಾರ್ಯಾಧ್ಯಕ್ಷ, ಜಿಪಂ ಉಪಕಾರ್ಯದರ್ಶಿ (ಅಭಿವೃದ್ಧಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.