ಶುದ್ಧ ಕುಡಿಯುವ ನೀರು ಘಟಕ ಕಾಮಗಾರಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ರಾಜೇಂದ್ರ, ಸತೀಶ್, ರಾಜೇಗೌಡ, ಅರೇನಹಳ್ಳಿ ಪರಮೇಶ್, ಲೋಕಪಾಲಯ್ಯ ಇತರರಿದ್ದರು.  
ಮೈಸೂರು

ಮೂಲ ಸೌಕರ್ಯ ನೀಡಲು ಕ್ರಮ

Action to provide infrastructure

ರಾವಂದೂರು: ಗ್ರಾಮೀಣ ಜನರು ಉತ್ತಮ ಬದುಕು ನಡೆಸಲು ಮೂಲ ಸೌಕರ್ಯ ನೀಡಲು ಮೊದಲ ಆದ್ಯತೆ ನೀಡಲಾಗುವುದು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕು ಮಲಗನಕೆರೆ ಗ್ರಾಮದಲ್ಲಿ ಶುಕ್ರವಾರ ಶುದ್ಧ ಕುಡಿಯುವ ನೀರು ಘಟಕ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ತಾಲೂಕಿನ ಗಡಿಭಾಗದ ಮೊದಲ ಗ್ರಾಮವಾದ ಮಲಗನಕೆರೆ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗುವುದು. ಗ್ರಾಮಸ್ಥರ ಬೇಡಿಕೆಯಂತೆ ದೇವಾಲಯದ ಅಭಿವೃದ್ಧಿಗೂ ಸಹ ಅನುದಾನ ನೀಡಲಾಗುವುದು ಎಂದು ತಿಳಿಸಿದರು.

ನಾನು ಚುನಾವಣಾ ಸಂದರ್ಭದಲ್ಲಿ ಬಂದಾಗ ಜನರ ಶುದ್ಧ ಕುಡಿಯುವ ನೀರು ಘಟಕ ನಿರ್ಮಿಸಲು ಮನವಿ ಮಾಡಿದ್ದರು. ಇದೀಗ ಕಾರ್ಯರೂಪಕ್ಕೆ ತರುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಗ್ರಾಮಕ್ಕೆ ಆಗಮಿಸಿದ ಸಂಸದರನ್ನು ಪೂರ್ಣ ಕುಂಭ ಸ್ವಾಗತದಿಂದ ಬರಮಾಡಿಕೊಳ್ಳಲಾಯಿತು.

ತಾಲೂಕು ಬಿಜೆಪಿ ಅಧ್ಯಕ್ಷ ರಾಜೇಂದ್ರ, ಮುಖಂಡರಾದ ಸತೀಶ್, ರಾಜೇಗೌಡ, ಅರೇನಹಳ್ಳಿ ಪರಮೇಶ್, ಲೋಕಪಾಲಯ್ಯ, ಪರಿಷತ್‌ರಾಜೇಅರಸ್, ನಳಿನಾಕ್ಷಿ, ಗ್ರಾಮಸ್ಥರಾದ ಶಿವಶಂಕರ್, ವಿಜಯಕುಮಾರ್, ಇಂದ್ರೇಶ್, ಆರಾಧ್ಯ, ಬಸವಲಿಂಗಪ್ಪ, ನಿಂಗರಾಜು ಇತರರಿದ್ದರು.