ಮೂಗೂರಿನಲ್ಲಿ ಶ್ರೀ ಶನೈಶ್ಚರಸ್ವಾಮಿ 70ನೇ ವಾರ್ಷಿಕೋತ್ಸವದ ಅಂಗವಾಗಿ ಹೂವಿನ ಪಲ್ಲಕ್ಕಿ ಉತ್ಸವ ಶನಿವಾರ ನಡೆಯಿತು. Sri Shanaishchara Swamy Flower Palanquin Festival in Mooguru
ಮೈಸೂರು

ಮೂಗೂರಿನಲ್ಲಿ ಶ್ರೀ ಶನೈಶ್ಚರಸ್ವಾಮಿ ಹೂವಿನ ಪಲ್ಲಕ್ಕಿ ಉತ್ಸವ

Sri Shanaishchara Swamy Flower Palanquin Festival in Mooguru

ಮೂಗೂರು: ಶ್ರೀ ಶನೈಶ್ಚರಸ್ವಾಮಿ 70ನೇ ವಾರ್ಷಿಕೋತ್ಸವ ಅಂಗವಾಗಿ ಶನಿವಾರ ಸಂಜೆ ಗ್ರಾಮದಲ್ಲಿ ಶ್ರೀ ಶನೈಶ್ಚರ ಸ್ವಾಮಿಯ ಹೂವಿನ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗಿತು.

ಶನಿವಾರ ಬೆಳಗ್ಗೆ 8.30ಕ್ಕೆ ಶ್ರೀ ಶನೈಶ್ಚರ ಸ್ವಾಮಿಯ ದೇವಾಲಯದಿಂದ ಮಧ್ಯದ ಬೀದಿಯವರೆಗೆ ಕಾಕವಾಹನೋತ್ಸವ ನಡೆಯಿತು.

ವಾರ್ಷಿಕೋತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳನ್ನು ತಳಿರು-ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದ ಸಂಜೆಯವರೆಗೆ ಗ್ರಾಮಸ್ಥರು ದೇವಾಲಯಕ್ಕೆ ತೆರಳಿ ಶ್ರೀ ಶನೈಶ್ಚರ ಸ್ವಾಮಿಯವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ಸಂಜೆ 6.30ಕ್ಕೆ ವಾದ್ಯ ಗೋಷ್ಠಿ ವಸಂತಾ ಕರಡಕೆರೆ ಅವರಿಂದ ಡೊಳ್ಳು ಕುಣಿತದೊಂದಿಗೆ ಶ್ರೀ ಶನೈಶ್ಚರ ಸ್ವಾಮಿಯವರ ಹೂವಿನ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸಹಸ್ರಾರು ಇದನ್ನು ಭಕ್ತರು ಕಣ್ತುಂಬಿಕೊಂಡರು.

ಈ ವೇಳೆ ಗ್ರಾಮಸ್ಥರು ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಅಲ್ಲದೆ ಉತ್ಸವದ ವೇಳೆ ಭಕ್ತರು ಅಲಲ್ಲಿ ವಿವಿಧ ಬಗೆಯ ಪ್ರಸಾದ, ಅನ್ನಸಂತರ್ಪಣೆ ನಡೆಸಿದರು. ಪಲ್ಲಕ್ಕಿ ಉತ್ಸವವು ಮಧ್ಯದ ಬೀದಿಯ ಹೆತ್ತವ್ವ ಕಲ್ಲಿನ ದೇಗುಲದ ಬಳಿ ತಲುಪಿದ ನಂತರ ಗ್ರಾಮಸ್ಥರು ಹಾಗೂ ಸಮಿತಿಯವರ ನೇತೃತ್ವದಲ್ಲಿ ದೇವರಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ದೇವಾಲಯದ ಆವರಣದಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು. ರಾತ್ರಿ 11 ಗಂಟೆಗೆ ಬದನವಾಳು ಶ್ರೀ ಭರತ್ ಶಿವುಕುಮಾರ ಶಾಸ್ತ್ರಿ ಅವರಿಂದ ರಾಜ ವಿಕ್ರಮ ಅಥವಾ ಶನಿ ಪ್ರಭಾವ ಎಂಬ ಹರಿಕಥೆ ಏರ್ಪಡಿಸಲಾಗಿತ್ತು.