ಮಹರ್ಷಿ ವಾಲ್ಮೀಕಿಯವರ ಭಾವಚಿತ್ರ ಮೆರವಣಿಗೆಗೆ ಮೆರುಗು ತುಂಬಿದ ಕಲಾತಂಡಗಳು May the achievements of Maharshi Valmiki reach future generations too: Minister Dr. Yathindra’s suggestion
ಮೈಸೂರು

ಮಹರ್ಷಿ ವಾಲ್ಮೀಕಿ ಸಾಧನೆ ಮುಂದಿನ ಪೀಳಿಗೆಗೂ ತಲುಪಲಿ: ಸಚಿವ ಡಾ.ಯತೀಂದ್ರ ಸಲಹೆ

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ

ಮೈಸೂರು: ಪ್ರತಿಭೆ ಮತ್ತು ಜ್ಞಾನವಿದ್ದರೆ ಉನ್ನತ ಸಾಧನೆ ವಾಡಲು ಸಾಧ್ಯ ಎಂಬುದಕ್ಕೆ ಮಹರ್ಷಿ ವಾಲ್ಮೀಕಿ ಜೀವನವೇ ನಿದರ್ಶನ. ಅವರ ಸಾಧನೆ ಎಲ್ಲ ಸಮುದಾಯಗಳಿಗೂ ಪ್ರೇರಣೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ವಾತನಾಡಿದರು.

ವಾಲ್ಮೀಕಿ ಅವರ ಜೀವನ ಎಲ್ಲರಿಗೂ ಸ್ಛೂರ್ತಿ. ಐತಿಹ್ಯದ ಪ್ರಕಾರ ಬೇಡ ಸಮುದಾಯದ ಹಿನ್ನೆಲೆಯಿಂದ ಬಂದ ಅವರು ಜ್ಞಾನ ಪಡೆದು ಮಹರ್ಷಿಯಾಗಿ, ಜಗತ್ತಿನ ಮೊದಲ ಮಹಾಕಾವ್ಯವೆಂದು ಗುರುತಿಸಲ್ಪಟ್ಟ ರಾವಾಯಣವನ್ನು ರಚಿಸಿದರು ಎಂದರು.

ಸಾವಿರಾರು ವರ್ಷಗಳಿಂದ ಭಾರತೀಯ ಸವಾಜದ ಜಾತಿ ವ್ಯವಸ್ಥೆಯಲ್ಲಿ ಶೋಷಿತ ಸಮುದಾಯಗಳು ದೌರ್ಜನ್ಯ, ತಾರತಮ್ಯಕ್ಕೆ ಒಳಗಾಗಿವೆ. ಇಂತಹ ಜನರಿಗೆ ಸಾಧನೆ ವಾಡಲು ಸಾಧ್ಯವಿಲ್ಲ ಎಂಬ ಮನೋಭಾವ ಬೆಳೆಸಲಾಗಿದೆ. ಇದನ್ನು ಬದಲಿಸಿ, ಶೋಷಿತ ಸಮುದಾಯಗಳಲ್ಲೂ ಸಾಧಕರು ಹುಟ್ಟಿದ್ದಾರೆ ಎಂಬುದನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು. ಇದರಿಂದ ಮಕ್ಕಳು, ಯುವ ಜನರಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಎಂದರು.

ವಾಲ್ಮೀಕಿ ಅವರು ರಾವಾಯಣದಲ್ಲಿ ಚಿತ್ರಿಸಿರುವ ಶ್ರೀರಾಮನ ವ್ಯಕ್ತಿತ್ವ ಆದರ್ಶಪ್ರಾಯ. ಸತ್ಯ, ಧರ್ಮ, ತ್ಯಾಗ, ಶೌರ್ಯ ಮತ್ತು ಪಿತೃವಾಕ್ಯ ಪರಿಪಾಲನೆಯಂತಹ ಮೌಲ್ಯವನ್ನು ರಾಮನ ಪಾತ್ರದಲ್ಲಿ ಪ್ರತಿಬಿಂಬಿಸಿದ್ದಾರೆ. ಉತ್ತಮ ಆಡಳಿತ, ಸಮೃದ್ಧಿ, ನ್ಯಾಯಯುತ ವ್ಯವಸ್ಥೆ ಇಂದಿಗೂ ರಾಮರಾಜ್ಯ ಎಂದು ಕರೆಯಲಾಗುತ್ತದೆ. ರಾವಾಯಣದ ಮೌಲ್ಯ ಇಂದಿನ ಸವಾಜಕ್ಕೂ ಪ್ರಸ್ತುತವಾಗಿದೆ ಎಂದು ಹೇಳಿದರು.

ಶೌರ್ಯ, ನಿಷ್ಠೆ, ಹೋರಾಟಕ್ಕೆ ಹೆಸರಾದ ನಾಯಕ ಸಮುದಾಯ ಜಾತಿ ವ್ಯವಸ್ಥೆ ಕಾರಣದಿಂದ ಹಿಂದುಳಿದಿರುವುದು ದುರದೃಷ್ಟಕರ. ಸಮುದಾಯದವರು ಸಂಘಟಿತರಾಗಿ ಹೋರಾಡುವುದರ ಜತೆಗೆ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ, ಸವಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು ಎಂದು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಾಲ್ಮೀಕಿ ಪ್ರತಿಮೆ ನಿರ್ವಾಣ ಕಾರ್ಯ ಪ್ರಗತಿಯಲ್ಲಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವಾಲ್ಮೀಕಿ ಟ್ರಸ್ಟ್‌ಗೆ ಐದು ಎಕರೆ ಜಮೀನು ಮಂಜೂರು ಮಾಡಲಾಗಿದೆ. ನಾಯಕ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧ, ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಲಿದೆ. ಶೋಷಿತ ವರ್ಗಗಳ ಅಭಿವೃದ್ಧಿ, ಅವರ ಹಕ್ಕುಗಳನ್ನು ರಕ್ಷಿಸುವ ಕೆಲಸ ಮುಂದುವರಿಯಲಿದೆ ಎಂದು ಭರವಸೆ ನೀಡಿದರು.

ಶಾಸಕ ಜಿ.ಟಿ.ದೇವೇಗೌಡ ವಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿದ ರಾವಾಯಣ ಜಗತ್ತಿನ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾಗಿದೆ. ರಾವಾಯಣದ ಸತ್ಯ, ನ್ಯಾಯ, ನೀತಿ, ಧರ್ಮ, ಸವಾನತೆ, ಸಹೋದರತ್ವದ ಮೌಲ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣದ ಜತೆಗೆ ನೈತಿಕ ಮೌಲ್ಯ, ಸಂಸ್ಕಾರ ಕಲಿಸಬೇಕು ಎಂದು ಹೇಳಿದರು.

ಶಾಸಕ ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಕೆ.ಶಿವಕುವಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ.ನರೇಂದ್ರ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್.ಯುಕ್ತೇಶ್ ಕುವಾರ್ ಇನ್ನಿತರರಿದ್ದರು

ಜಗತ್ತಿನ ಸಾಹಿತ್ಯ ಪರಂಪರೆಯ ಭಾಗ

ತುಮಕೂರಿನ ಪ್ರಾಧ್ಯಾಪಕ ಪ್ರೊ.ನಾಗಭೂಷಣ ಬಗ್ಗನಡು ಮಾತನಾಡಿ, ರಾವಾಯಣವು ಕೇವಲ ಹಿಂದೂ ಧರ್ಮಕ್ಕೆ ಸೇರಿದ ಕೃತಿಯಲ್ಲ. ಬೌದ್ಧ, ಜೈನ ಪರಂಪರೆಯಲ್ಲೂ ರಾವಾಯಣದ ರೂಪಾಂತರಗಳಿವೆ. ಮುಸ್ಲಿಂ ಧರ್ಮದಲ್ಲೂ ರಾಮಾಯಾಣವಿದೆ. ಇಂಡೋನೇಷ್ಯಾ ಸೇರಿದಂತೆ ವಿವಿಧ ದೇಶಗಳಲ್ಲಿ ರಾವಾಯಣದ ಕಥನಗಳು ಪ್ರಸಾರಗೊಂಡಿವೆ. ಹಲವು ಭಾಷೆಗಳಲ್ಲಿ ವಿಭಿನ್ನ ರೂಪಗಳಲ್ಲಿ ಬೆಳೆದಿರುವ ಈ ಮಹಾಕಾವ್ಯಕ್ಕೆ ವಾಲ್ಮೀಕಿ ಮೂಲ ಪ್ರೇರಣೆ. ಆದ್ದರಿಂದ ರಾವಾಯಣವನ್ನು ಒಂದು ಧರ್ಮ ಅಥವಾ ಸಮುದಾಯಕ್ಕೆ ವಾತ್ರ ಸೀಮಿತಗೊಳಿಸದೆ, ಜಗತ್ತಿನ ಸಾಹಿತ್ಯ ಪರಂಪರೆಯ ಭಾಗವಾಗಿ ಪರಿಗಣಿಸಬೇಕು ಎಂದು ಹೇಳಿದರು.

‘ವಾಲ್ಮೀಕಿ ಒಬ್ಬ ದರೋಡೆಕೋರನಾಗಿದ್ದು, ನಾರದರಿಂದ ಉಪದೇಶ ಪಡೆದ ಬಳಿಕ ಮಹಾಕಾವ್ಯ ರಚಿಸಿದ’ಎಂಬ ಸುಳ್ಳ ಕಥನವನ್ನು ಹರಡಲಾಗುತ್ತಿದೆ. ಇಂತಹ ಕಥೆಗಳು ವಾಲ್ಮೀಕಿಯವರ ಮೂಲ ಸಾಹಿತ್ಯದ ಚರ್ಚೆಯನ್ನು ಮಸುಕಾಗಿಸಿವೆ ಎಂದು ಹೇಳಿದರು.