ಹುಣಸೂರು: ಮೈಸೂರಿನ ಎಂಎಂಸಿ ಪ್ಲಾಟಿನಮ್ ಜುಬಿಲಿ ಆಡಿಟೋರಿಯಂನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕರ್ನಾಟಕ ಸ್ಟೇಟ್ ಸ್ಪೋರ್ಟ್ಸ್ ಡಾನ್ಸ್ ಚಾಂಪಿಯನ್ಷಿಪ್-2026ರಲ್ಲಿ ಹುಣಸೂರಿನ ಕಾವೇರಿ ಎಕ್ಸ್ಪ್ರೆಸ್ ಡಾನ್ಸ್ ಅಕಾಡೆಮಿ ವಿದ್ಯಾರ್ಥಿಗಳು ಹಲವು ವಿಭಾಗಗಳಲ್ಲಿ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಾನಪದ ನೃತ್ಯದ ಬಾಲಕಿಯರ ಜೂನಿಯರ್ ದೀಕ್ಷಾ ಮತ್ತು ಹಿಮಾ ಜೋಡಿ ಪ್ರಥಮ ಸ್ಥಾನ(ಚಿನ್ನದ ಪದಕ) ಮತ್ತು ದೀಕ್ಷಾ ಮತ್ತವರ ತಂಡ ಬೆಳ್ಳಿ ಪದಕದೊಂದಿಗೆ ದ್ವಿತೀಯ ಸ್ಥಾನ ಗಳಿಸಿತು.
ಸಿನಿಯರ್ ವಿಭಾಗದಲ್ಲಿ(17ವರ್ಷದೊಳಗಿನ)ಸ್ವಪ್ನಾ ಮತ್ತು ತಂಡ ಚಿನ್ನದ ಪದಕ ಪಡೆದಿದ್ದಾರೆ. ವೆಸ್ಟೆರ್ನ್ ಡಾನ್ಸ್ನಲ್ಲಿ ಸಬ್ ಜೂನಿಯರ್ ವಿಭಾಗದಲ್ಲಿ ದೀಪಿತ್ ಮತ್ತು ತಂಡ ಪ್ರಥಮ ಬಹುಮಾನದೊಂದಿಗೆ ಚಿನ್ನದ ಪದಕ, ಜೂನಿಯರ್ಸ್ ವಿಭಾಗದಲ್ಲಿ ಹಿಮಾ ಮತ್ತು ತಂಡ ತೃತೀಯ ಬಹುಮಾನ ಕಂಚಿನ ಪದಕ ಗಿಟ್ಟಿಸಿಕೊಂಡರು.
ಸಿನಿಯರ್ ವಿಭಾಗದಲ್ಲಿ ವರ್ಷಿತಾ ಮತ್ತು ತಂಡ ಎರಡನೇ ಬಹುಮಾನದೊಂದಿಗೆ ಬೆಳ್ಳಿ ಪದಕ ಹಾಗೂ ಅನು ಮತ್ತು ತಂಡ ಪ್ರಥಮ ಬಹುಮಾನ ಚಿನ್ನದ ಪದಕ ಗಳಿಸಿದರು. ಅಲ್ಲದೆ ಡಿಸೆಂಬರ್ನಲ್ಲಿ ಕೇರಳದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.