ನೇರಳಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ವಸಂತಾ ಚಂದ್ರಶೇಖರ್ ಅವರನ್ನು ಸಂಘದ ಉಪಾಧ್ಯಕ್ಷ ಸದಾಶಿವ ಹಾಗೂ ನಿರ್ದೇಶಕರು ಅಭಿನಂದಿಸಿದರು.  Vasantha is the President of the Neralakuppe Dairy.
ಮೈಸೂರು

ನೇರಳಕುಪ್ಪೆ ಡೇರಿಗೆ ವಸಂತಾ ಅಧ್ಯಕ್ಷೆ

Vasantha is the President of the Neralakuppe Dairy.

ಹನಗೋಡು: ಹೋಬಳಿಯ ನೇರಳಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕಚುವಿನಹಳ್ಳಿ ಗ್ರಾಮದ ವಸಂತಾ ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎಂ.ಜೆ. ಅಪ್ಪಣ್ಣ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಭಾನುವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ವಸಂತಾ ಚಂದ್ರಶೇಖರ್ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಘೋಷಿಸಿದರು.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

ನೂತನ ಅಧ್ಯಕ್ಷರನ್ನು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್ ಅಭಿನಂದಿಸಿದರು. ಸಂಘದ ಉಪಾಧ್ಯಕ್ಷ ಸದಾಶಿವ, ನಿರ್ದೇಶಕರಾದ ಜಿ.ಎಂ. ದೇವಯ್ಯ, ಕೆ.ಗಣಪತಿ, ಎಂ.ಜಿ. ಅಪ್ಪಣ್ಣ, ಕುಮಾರ್, ನಾಗರಾಜು, ಮಹೇಶ್, ಮಂಜುಳಾ, ಗಿರಿಜಮ್ಮ, ನೇರಳಕುಪ್ಪೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ರುಕ್ಮಿಣಿ ಸುರೇಶ್, ಹನಗೋಡು ಸಹಕಾರ ಸಂಘದ ಅಧ್ಯಕ್ಷ ಲೋಕೇಶ್, ಮುಖಂಡರಾದ ತಿಮ್ಮೇಗೌಡ, ಅಯ್ಯಣ್ಣ, ಸಹದೇವ, ಸತಿ, ಶಿವ, ಮಂಜು, ಕುಮಾರ್, ಶಿವಣ್ಣೇಗೌಡ, ನಾಗೇಂದ್ರ, ಲಿಂಗರಾಜು ಕುಮಾರ, ಗಣೇಶ, ಅರ್ಜುನ್ ಉಪಸ್ಥಿತರಿದ್ದರು.