ಮೈಸೂರು

ನಗರದ ಪ್ರಮುಖ ರಸ್ತೆಗಳ ಸಂಚಾರ ಬಂದ್

* ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಭೇಟಿ ಹಿನ್ನೆಲೆ * ಸಾರ್ವಜನಿಕರ ಅನುಕೂಲಕ್ಕಾಗಿ ಪರ್ಯಾಯ ಮಾರ್ಗ

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಮೈಸೂರು ನಗರ ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಪ್ರಕಟಿಸಿದ್ದಾರೆ.

ಲಲಿತಾದ್ರಿಪುರ ರಸ್ತೆ, ಐವಾಕ್ ರಸ್ತೆ, ಲಲಿತ್ ಮಹಲ್ ರಸ್ತೆ, ಚಾಮುಂಡಿಬೆಟ್ಟದ ರಸ್ತೆ, ಲಾರಿ ಟರ್ಮಿನಲ್ ರಸ್ತೆ ಹಾಗೂ ನಂಜನಗೂಡು ರಸ್ತೆಯಲ್ಲಿ ಸಂಚಾರ ನಿರ್ಬಂಧ ಇರಲಿದೆ. ಲಲಿತಾದ್ರಿಪುರ ರಸ್ತೆಯಿಂದ ಹೆಲಿಪ್ಯಾಡ್ ಜಂಕ್ಷನ್‌ವರೆಗೆ, ಐವಾಕ್ ಜಂಕ್ಷನ್‌ನಿಂದ ಚಾಮುಂಡಿಬೆಟ್ಟದ ರಸ್ತೆ ಜಂಕ್ಷನ್‌ವರೆಗೆ, ತಿ.ನರಸೀಪುರ ರಸ್ತೆ ಜಂಕ್ಷನ್‌ನಿಂದ ಆರ್‌ಎಂಸಿ ವೃತ್ತದವರೆಗೆ, ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚಾಮುಂಡಿಬೆಟ್ಟದವರೆಗೆ, ಆರ್‌ಎಂಸಿ ವೃತ್ತದಿಂದ ರಾಜಹಂಸ ಜಂಕ್ಷನ್‌ವರೆಗೆ ಹಾಗೂ ರಾಜಹಂಸ ಜಂಕ್ಷನ್‌ನಿಂದ ನಂಜನಗೂಡು ರಿಂಗ್ ರಸ್ತೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗಗಳ ವಿವರ

* ಲಲಿತಾದ್ರಿಪುರ ಕಡೆಯಿಂದ ಹೆಲಿಪ್ಯಾಡ್ ರಸ್ತೆ ಮೂಲಕ ಎಂ.ಎಂ. ರಸ್ತೆಗೆ ತೆರಳುವ ವಾಹನಗಳು ನೇತಾಜಿ ನಗರ, ಆಲನಹಳ್ಳಿ ರಸ್ತೆ, ಟಿ.ಜಂಕ್ಷನ್, ಆರ್. ಮಹದೇವಪ್ಪ ವೃತ್ತ ಹಾಗೂ ಎಂ.ಎಂ. ರಸ್ತೆ ಮೂಲಕ ಸಾಗಬೇಕು.

*ತಿ.ನರಸೀಪುರ ಟಿ. ಜಂಕ್ಷನ್ ಕಡೆಯಿಂದ ಎಂ.ಜಿ. ರಸ್ತೆಗೆ ತೆರಳುವ ವಾಹನಗಳು ಟಿ. ಜಂಕ್ಷನ್, ಮಹದೇವಪ್ಪ ವೃತ್ತ, ಎಂ.ಎಂ. ರಸ್ತೆ, ನಜರ್‌ಬಾದ್ ವೃತ್ತ, ಲಿಂಗಣ್ಣ ವೃತ್ತ, ಇಟ್ಟಿಗೆಗೂಡು ಪೋಸ್ಟ್ ಆಫೀಸ್ ರಸ್ತೆ ಹಾಗೂ ಎಂ.ಜಿ. ರಸ್ತೆ ಅಂಡರ್‌ಪಾಸ್ ಮೂಲಕ ಸಾಗಬೇಕು.

*ಗೌತಮ ಬುದ್ಧ ವೃತ್ತದಿಂದ ಲಲಿತಾದ್ರಿಪುರ ಕಡೆಗೆ ತೆರಳುವ ವಾಹನಗಳು ವಿನಯ ಮಾರ್ಗ, ಸಂಗೀತಾ ಕಾರ್ನರ್, ಟಿ. ಜಂಕ್ಷನ್, ಆಲನಹಳ್ಳಿ ರಸ್ತೆ ಹಾಗೂ ನೇತಾಜಿ ಮುಖ್ಯ ರಸ್ತೆ ಬಳಸಬೇಕು.

*ಸರ್ಕಸ್ ಮೈದಾನದಿಂದ ತಿ.ನರಸೀಪುರ ರಸ್ತೆ ಕಡೆಗೆ ತೆರಳುವ ವಾಹನಗಳು ನಜರ್‌ಬಾದ್ ವೃತ್ತ, ಎಂ.ಎಂ. ರಸ್ತೆ, ಗೌತಮ ಬುದ್ಧ ವೃತ್ತ, ವಿನಯ ಮಾರ್ಗ, ಸಂಗೀತಾ ಕಾರ್ನರ್, ಟಿ. ಜಂಕ್ಷನ್ ಹಾಗೂ ಆಲನಹಳ್ಳಿ ರಸ್ತೆ ಮೂಲಕ ಸಾಗಬೇಕು.

*ಲಿಂಗಣ್ಣ ವೃತ್ತದಿಂದ ಎಂ.ಜಿ. ರಸ್ತೆ ಕಡೆಗೆ ತೆರಳುವ ವಾಹನಗಳು ಇಟ್ಟಿಗೆಗೂಡು ಪೋಸ್ಟ್ ಆಫೀಸ್ ರಸ್ತೆ, ಮಾನಸರ ರಸ್ತೆ ಹಾಗೂ ಎಂ.ಜಿ. ರಸ್ತೆ ಅಂಡರ್‌ಬ್ರಿಡ್ಜ್ ಮೂಲಕ ಸಾಗಬೇಕು.

*ಗನ್‌ಹೌಸ್ ವೃತ್ತದಿಂದ ನಂಜನಗೂಡು ರಸ್ತೆ ಕಡೆಗೆ ತೆರಳುವ ವಾಹನಗಳು ಬಸವೇಶ್ವರ ವೃತ್ತ, ಅಗ್ರಹಾರ ವೃತ್ತ, ರಾಮಾನುಜ ರಸ್ತೆ, ವಿದ್ಯಾರಣ್ಯಪುರಂ ರಸ್ತೆ ಹಾಗೂ ಅಕ್ಕಮಹಾದೇವಿ ರಸ್ತೆ ಬಳಸಬೇಕು.

*ಕಂಸಾಳೆ ಮಹದೇವಯ್ಯ ವೃತ್ತದಿಂದ ಎಲೆತೋಟ ಜಂಕ್ಷನ್ ಮೂಲಕ ನಂಜನಗೂಡು ರಸ್ತೆ ಕಡೆಗೆ ತೆರಳುವ ವಾಹನಗಳು ಜೆಎಲ್‌ಬಿ ರಸ್ತೆ, ಕಂಸಾಳೆ ಮಹದೇವಯ್ಯ ವೃತ್ತ, ಸೂಯೇಜ್ ಫಾರ್ಮ್ ರಸ್ತೆ, ಅಕ್ಕಮಹಾದೇವಿ ರಸ್ತೆ ಹಾಗೂ ರಿಂಗ್ ರಸ್ತೆ ಮೂಲಕ ಸಾಗಬೇಕು.

*ಕಂಸಾಳೆ ಮಹದೇವಯ್ಯ ವೃತ್ತದಿಂದ ಹಾರ್ಡಿಂಜ್ ವೃತ್ತದ ಕಡೆಗೆ ತೆರಳುವ ವಾಹನಗಳು ರಾಮಾನುಜ ರಸ್ತೆ, ಓಲ್ಡ್ ಜೆಎಸ್‌ಎಸ್ ಜಂಕ್ಷನ್ ಹಾಗೂ ಗನ್‌ಹೌಸ್ ವೃತ್ತದ ಮೂಲಕ ಸಾಗಬೇಕು.

*ಜೆ.ಪಿ. ನಗರ ಲಿಂಕ್ ರಸ್ತೆ ಕಡೆಯಿಂದ ನಂಜನಗೂಡು ರಸ್ತೆ ಕಡೆಗೆ ತೆರಳುವ ವಾಹನಗಳು ಲಿಂಕ್ ರಸ್ತೆ, ಅಕ್ಕಮಹಾದೇವಿ ರಸ್ತೆ ಹಾಗೂ ರಿಂಗ್ ರಸ್ತೆ ಬಳಸಬೇಕು.

*ಜೆ.ಪಿ. ನಗರ ಲಿಂಕ್ ರಸ್ತೆಯಿಂದ ಗನ್‌ಹೌಸ್ ಕಡೆಗೆ ತೆರಳುವ ವಾಹನಗಳು ಲಿಂಕ್ ರಸ್ತೆ, ಅಕ್ಕಮಹಾದೇವಿ ರಸ್ತೆ, ವಿದ್ಯಾರಣ್ಯಪುರಂ ರಸ್ತೆ, ರಾಮಾನುಜ ರಸ್ತೆ, ಓಲ್ಡ್ ಜೆಎಸ್‌ಎಸ್ ಜಂಕ್ಷನ್ ಹಾಗೂ ಗನ್‌ಹೌಸ್ ವೃತ್ತದ ಮೂಲಕ ಸಾಗಬೇಕು.

*ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚಾಮುಂಡಿಬೆಟ್ಟಕ್ಕೆ ತೆರಳುವ ವಾಹನಗಳು ಜಿಎಸ್‌ಟಿ ಭವನ ಜಂಕ್ಷನ್, ಗೌತಮ ಬುದ್ಧ ವೃತ್ತ, ಸಂಗೀತಾ ಕಾರ್ನರ್, ಟಿ. ಜಂಕ್ಷನ್, ಸಾವಿತ್ರಿಬಾಯಿ ಪುಲೆ ವೃತ್ತ, ರಿಂಗ್ ರಸ್ತೆ ಹಾಗೂ ಉತ್ತನಹಳ್ಳಿ ಮೂಲಕ ಬೆಟ್ಟ ತಲುಪಬೇಕು. ಸಾರ್ವಜನಿಕರು ಪೊಲೀಸರ ಸೂಚನೆಗಳನ್ನು ಪಾಲಿಸಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ನಗರ ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.