ನಜರ್‌ಬಾದ್‌ನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮೈಸೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಓಟದಲ್ಲಿ ಪಾಲ್ಗೊಂಡಿರುವ ಸ್ಪರ್ಧಿಗಳು. Dasara Sports Meet: Thrilling competition among athletes
ಮೈಸೂರು

ದಸರಾ ಕ್ರೀಡಾಕೂಟ: ಕ್ರೀಡಾಪಟುಗಳ ನಡುವೆ ರೋಚಕ ಪೈಪೋಟಿ

ನಜರ್‌ಬಾದ್‌ನಲ್ಲಿರುವ ಚಾಮುಂಡಿ ವಿಹಾರ ಆಯೋಜನೆ ವಿವಿಧ ಸ್ಪರ್ಧೆಯಲ್ಲಿ ಗೆದ್ದವರ ಸಂತಸ

ಮೈಸೂರು: ಮೈಸೂರು ತಾಲೂಕು ಮಟ್ಟದ 2026-27ನೇ ಸಾಲಿನ ದಸರಾ ಕ್ರೀಡಾಕೂಟವನ್ನು ನಗರದ ನಜರ್‌ಬಾದ್‌ನಲ್ಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.

ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಯಲ್ಲಿ ಪೈಪೋಟಿ ಕಂಡುಬಂತು.

ಕ್ರೀಡಾಕೂಟದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ವಿವಿಧ ಓಟ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲೀನ್ ಥ್ರೋ, ಡಿಸ್ಕ್ ಥ್ರೋ, 110 ಮೀ. ಹರ್ಡಲ್ಸ್ 4*100 ಮೀ ರಿಲೇ, 4*400 ರಿಲೇ ಸ್ಪರ್ಧೆಗಳು ನಡೆದವು. ಇದರೊಂದಿಗೆ ವಾಲಿಬಾಲ್, ಫುಟ್‌ಬಾಲ್, ಖೋಖೋ, ಕಬಡ್ಡಿ, ಥ್ರೋಬಾಲ್ ಹಾಗೂ ಯೋಗಾಸನ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿತ್ತು.

ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ಗುಂಪು ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಜಿಲ್ಲಾ ಮಟ್ಟ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾದರು.

ಅಥ್ಲೆಟಿಕ್ಸ್ ಫಲಿತಾಂಶ:

ಪುರುಷರ ವಿಭಾಗ: 100 ಮೀ. ಓಟ: ಜಿ.ಸಿ.ಗುರುಪ್ರಸಾದ್(ಪ್ರಥಮ), ಎಲ್.ಪವನ್(ದ್ವಿತೀಯ), ಜಿ.ಗಿರೀಶ್‌ಕುಮಾರ್(ತೃತೀಯ). 200 ಮೀ. ಓಟ: ಜಿ.ಸಿಗುರುಪ್ರಸಾದ್(ಪ್ರಥಮ), ಜಿ.ಗಿರೀಶ್ ಕುಮಾರ್(ದ್ವಿತೀಯ), ವರುಣ್(ತೃತೀಯ). 400 ಮೀ. ಓಟ: ವರುಣ್(ಪ್ರಥಮ), ಯು.ತ್ರಿಷು(ದ್ವಿತೀಯ), ರಾಕೇಶ್(ತೃತೀಯ). 800 ಮೀ. ಓಟ: ಹರ್ಷಿತ್(ಪ್ರಥಮ), ಚಿರಾಯು(ದ್ವಿತೀಯ), ಟಿ.ಎಲ್. ರಿಷು(ತೃತೀಯ). 1500 ಮೀ. ಓಟ: ಎಂ.ಎಸ್.ಹರ್ಷಿತ್(ಪ್ರಥಮ), ಸಿದ್ದಲಿಂಗೇಶ್ ಎಸ್.ಎಂ(ದ್ವಿತೀಯ), ಪ್ರಣವ್ ಎಂ.ವಿ (ತೃತೀಯ). 5000 ಮೀ. ಓಟ: ಪುರುಷೋತ್ತಮ್(ಪ್ರಥಮ), ಶಿವನಂದ್(ದ್ವಿತೀಯ), ಸುಮಂತ್(ತೃತೀಯ). 10,000 ಮೀ. ಓಟ: ಆರ್.ಪುರುಷೋತ್ತಮ್

(ಪ್ರಥಮ),ವೈ.ಎಸ್.ದೀಕ್ಷಿತ್(ದ್ವಿತೀಯ).ಉದ್ದ ಜಿಗಿತ: ಸುಮಂತ್ ರಂಗ(ಪ್ರಥಮ), ಯದು(ದ್ವಿತೀಯ), ನಂದನ್(ತೃತೀಯ). ಎತ್ತರ ಜಿಗಿತ: ರಕ್ಷಿತ್(ಪ್ರಥಮ), ರಾಹುಲ್(ದ್ವಿತೀಯ), ಭಟ್ಟಿ (ತೃತೀಯ). ಗುಂಡು ಎಸೆತ: ಪ್ರಜ್ವಲ್ ಎಂ.ಶೆಟ್ಟಿ(ಪ್ರಥಮ), ಮೊಹಮ್ಮದ್ ಸಕ್ಲೇನ್ ಅಹಮ್ಮದ್(ದ್ವಿತೀಯ), ಗೌತಮ್ ಟಿ.ಇ(ತೃತೀಯ). ಟ್ರಿಪಲ್ ಜಂಪ್: ನಾಗೇಂದ್ರ ಪ್ರಸಾದ್(ಪ್ರಥಮ), ಚಿರಂತ್(ದ್ವಿತೀಯ), ಎಂ.ಲಿಖಿತ್(ತೃತೀಯ). ಜಾವಲಿನ್ ಎಸೆತ: ಟಿ.ಇಗೌತಮ್(ಪ್ರಥಮ), ನಂದನ್(ದ್ವಿತೀಯ), ಅಕ್ಷಯ್(ತೃತೀಯ). ಡಿಸ್ಕಸ್ ಥ್ರೋ: ಮೊಹಮ್ಮದ್ ಸಕ್ಲೇನ್ ಅಹಮ್ಮದ್(ಪ್ರಥಮ), ಎಂ.ಲಿಖಿತ್(ದ್ವಿತೀಯ). 4 *100 ಮೀ. ರಿಲೇ: ಗುರುಪ್ರಸಾದ್, ಹರ್ಷಿತ್‌ಗೌಡ, ಅಕ್ಷಯ್, ಸುಜನ್ ತಂಡ(ಪ್ರಥಮ). 4 * 400 ಮೀ. ರಿಲೇ: ಹರ್ಷಿತ್, ರಾಹುಲ್, ವರುಣ್, ದೀಪಕ್ ತಂಡ(ಪ್ರಥಮ).

ಮಹಿಳೆಯರ ವಿಭಾಗ:

100 ಮೀ. ಓಟ: ಎಂ.ಮಮತಾ (ಪ್ರಥಮ), ಸಾಧನ (ದ್ವಿತೀಯ), ಅಮೂಲ್ಯ(ತೃತೀಯ). 200 ಮೀ. ಓಟ: ಮಮತಾ(ಪ್ರಥಮ), ಎಸ್.ದೀಕ್ಷಿತಾ(ದ್ವಿತೀಯ), ದಿಶಾ ದಿವಾಕರ್(ತೃತೀಯ). 400 ಮೀ. ಓಟ: ವರ್ಷ(ಪ್ರಥಮ), ಎಸ್.ದೀಕ್ಷಿತಾ(ದ್ವಿತೀಯ), ನಿಶ್ಚಿತ ಪಿ.ಗೌಡ(ತೃತೀಯ). 800 ಮೀ. ಓಟ: ಆರ್.ಕಾವ್ಯಾ (ಪ್ರಥಮ), ಆರ್.ಕೀರ್ತನಾ(ದ್ವಿತೀಯ), ಪ್ರಿಯಾಂಕ ಕುಮಾರಿ (ತೃತೀಯ). 1500 ಮೀ. ಓಟ: ಶಿವಾನಿ(ಪ್ರಥಮ), ರೋಹಿಣಿ(ದ್ವಿತೀಯ), ಪ್ರಿಯಾಂಕಾ ಕುಮಾರಿ(ತೃತೀಯ). 3000 ಮೀ. ಓಟ: ಅಶ್ವಿ (ಪೊಲೀಸ್-ಪ್ರಥಮ), ಎಸ್.ಜಯಶ್ರೀ(ದ್ವಿತೀಯ), ಗಾಯತ್ರಿ (ತೃತೀಯ). ಉದ್ದ ಜಿಗಿತ: ಕೆ.ಲಿನ್ಯ ಮೇರಿ(ಪ್ರಥಮ), ಪಿ.ದೀಪಿಕಾ(ದ್ವಿತೀಯ), ದಿಶಾ ದಿವಾಕರ್(ತೃತೀಯ). ಎತ್ತರ ಜಿಗಿತ: ಅಮೂಲ್ಯಾ (ಪ್ರಥಮ), ನಿಖಿತಾ(ದ್ವಿತೀಯ), ಅಂಕಿತಾ ಎಸ್.ಬಾದಾದ್(ತೃತೀಯ).

ಗುಂಡು ಎಸೆತ: ಅಕ್ಷಾಂಶಾ(ಪ್ರಥಮ), ಎಸ್.ರೂಪಾ(ದ್ವಿತೀಯ), ಡಿ.ಚೈತ್ರಾ(ತೃತೀಯ). ಟ್ರಿಪಲ್ ಜಂಪ್: ಅಮೂಲ್ಯಾ(ಪ್ರಥಮ), ಕೆ.ಜೆ.ಸಿರಿ(ದ್ವಿತೀಯ). ಜಾವಲಿನ್ ಎಸೆತ: ವಿ.ಎಸ್.ಶ್ರೇಯಾ(ಪ್ರಥಮ), ಎಸ್.ರೂಪಾ(ದ್ವಿತೀಯ). ಡಿಸ್ಕಸ್ ಥ್ರೋ: ಎಂ.ಎನ್.ಸುಷ್ಮಾ (ಪ್ರಥಮ), ಎಂ. ಸುಮಾ(ದ್ವಿತೀಯ). 100 ಮೀ. ಹರ್ಡಲ್ಸ್: ನಿಖಿತಾ ಆನಂದ್ ಲಮಾಣಿ (ಪ್ರಥಮ), ಸಿರಿ(ದ್ವಿತೀಯ), ಅಮೃತಾ ಕೃಷ್ಣ(ತೃತೀಯ). 4* 100 ಮೀ. ರಿಲೇ: ದೀಪಿಕಾ, ಸಾಧನಾ, ನಿಶ್ಚಿತಾ ಪಿ.ಗೌಡ, ದೀಕ್ಷಿತ ತಂಡ (ಪ್ರಥಮ). 4*400 ಮೀ. ರಿಲೇ: ಶಿವಾನಿ, ಗಾಯತ್ರಿ, ರೋಹಿಣಿ, ಕಾವ್ಯಾ ತಂಡ (ಪ್ರಥಮ).

ಗುಂಪು ಸ್ಪರ್ಧೆಗಳು

ಕಬಡ್ಡಿ: ಪುರುಷರು: ಸಿದ್ದಲಿಂಗಪುರ ತಂಡ(ಪ್ರಥಮ), ನಾಗನಹಳ್ಳಿ ತಂಡ (ದ್ವಿತೀಯ). ಮಹಿಳೆಯರು: ಜೆಎಸ್‌ಎಸ್ ಮಹಿಳಾ ಕಾಲೇಜು, ಸರಸ್ವತಿಪುರಂ(ಪ್ರಥಮ), ರವಿ ಕಬಡ್ಡಿ ಅಕಾಡೆಮಿ, ಮೈಸೂರು(ದ್ವಿತೀಯ). ಖೋಖೋ:ಪುರುಷರು: ಪಿಯೋನೀರ್ ಸ್ಪೋರ್ಟ್ಸ್ ಕ್ಲಬ್(ಪ್ರಥಮ), ಚಾಮುಂಡಿ ಸ್ಪೋರ್ಟ್ಸ್ ಕ್ಲಬ್(ದ್ವಿತೀಯ). ಮಹಿಳೆಯರು: ಚಾಮುಂಡೇಶ್ವರಿ ಸ್ಪೋರ್ಟ್ಸ್ ಕ್ಲಬ್ (ಪ್ರಥಮ), ಜೆಎಸ್‌ಎಸ್ ಮಹಿಳಾ ಕಾಲೇಜು, ಸರಸ್ವತಿಪುರಂ (ದ್ವಿತೀಯ). ಥ್ರೋಬಾಲ್:ಪುರುಷರು: ಫಿಯೋನಿಕ್ಸ್, ಮೈಸೂರು (ಪ್ರಥಮ), ಜಿಎಚ್‌ವೈಟಿಸಿ ಹಾರೋಹಳ್ಳಿ(ದ್ವಿತೀಯ). ಮಹಿಳೆಯರು: ಜಿಎಚ್‌ಎಸ್ ಹಾರೋಹಳ್ಳಿ(ಪ್ರಥಮ), ಜೆಎಸ್‌ಎಸ್ ಮೈಸೂರು (ದ್ವಿತೀಯ).