ಬೈಲುಕುಪ್ಪೆ: ಹಿಂದೂಗಳೊಂದಿಗೆ ಟಿಬೆಟಿಯನರ ಒಡನಾಟ ಉತ್ತಮವಾಗಿದೆ ಎಂದು ಶಾಸಕ ಕೆ.ವೆಂಕಟೇಶ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಟಿಬೆಟಿಯನರ ಲಾಮಾ ಕ್ಯಾಂಪ್ ಸೆರಾ ಲೆಚ್ಚೆ ಮೊನೊ ಟ್ರೀ ಮುಖ್ಯ ರಸ್ತೆ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಟಿಬೆಟಿಯನರು ಭಾರತಕ್ಕೆ ಬಂದು 65ಕ್ಕೂ ಹೆಚ್ಚು ವರ್ಷ ಕಳೆಯಿತು.ಅಂದಿನಿಂದ ಇಂದಿನವರೆಗೆ ಸೌಹಾರ್ದದಿಂದ ಇದ್ದಾರೆ. ಡಿ.7ಕ್ಕೆ ಟಿಬೆಟಿಯನ್ ಧರ್ಮ ಗುರು ದಲೈ ಲಾಮ ಗುರೂಜಿ, ಲಾಮಾ ಕ್ಯಾಂಪಿ ಸೆರಮೆ ಪ್ರಾರ್ಥನ ಮಂದಿರಕ್ಕೆ ಬರಲಿದ್ದಾರೆ. ಎಲ್ಲ ವರ್ಗದ ಬಡವರ ಬಗ್ಗೆ ಕಾಳಜಿ ಹೊಂದಿರುವ ಅವರು ಈ ನಾಡಿನಲ್ಲಿ ನಡೆದಾಡಿದರೆ ನಮ್ಮ ನಡುವಿನ ಬಾಂಧವ್ಯ ಮತ್ತಷ್ಟ ಗಟ್ಟಿಯಾಗಲಿದೆ ಎಂದರು.
ಲಮಾ ಕ್ಯಾಂಪಿನ ಸೆರಾ ಲಚ್ಚೆ ಪ್ರಾರ್ಥನ ಮಂದಿರದ ಮುಖ್ಯಸ್ಥರಾದ ಜುಂಬೂ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು, ಭಾರತವನ್ನು ಎಂದು ಮರೆಯುವುದಿಲ್ಲ ಎಂದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್.ಕೆ ವೆಂಕಟೇಶ್, ಬ್ಲಾಕ್ ಅಧ್ಯಕ್ಷ ಟಿ.ಡಿ ಸ್ವಾಮಿ, ಮುಖಂಡರಾದ ರೆಹೆಮದ್ ಜಾನ್ ಬಾಬು, ಈಚೂರು ಲೋಕೇಶ್, ಬಸವರಾಜ್, ರಾಜಯ್ಯ, ಪುಟ್ಟರಾಜ್, ಶೇಕ್ ಅಸ್ಲಾಂ, ಮುತ್ತಿನ ಮುಳಸೋಗೆ, ಎಂ.ಬಿ.ಶಿವಕುಮಾರ್, ಸುಬ್ರಮಣ್ಯ, ಪಟೇಲ್ ಈಶ್ವರ, ಕೆ.ವಿಜಯ್ ಕುಮಾರ್, ಮಂಜು, ಮಹದೇವ್, ರಾಜು, ಗೆಲಾಕ್, ನುಬು, ಯೋಗಾನಂದ, ದಿನೇಶ್, ಸುನಿಲ್ ಕುಮಾರ್, ಪಿಡಿಒ ಯೋಗೀಶ್ ಇತರರು ಇದ್ದರು.