ಮೈಸೂರು

ಜೆಸಿಬಿ ಪಲ್ಟಿಯಾಗಿ ಡೆವಲಪರ್ ಮೃತ

ಚಾಲಕನ ಅಜಾಗರೂಕತೆಯಿಂದ ಜೆಸಿಬಿ ಏಕಾಏಕಿ ಚಂದ್ರಕುಮಾರ್ ಮೇಲೆ ಪಲ್ಟಿ

ಮೈಸೂರು: ಉತ್ತನಹಳ್ಳಿಯಲ್ಲಿ ಜೆಸಿಬಿ ಪಲ್ಟಿಯಾಗಿ ಡೆವಲಪರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದೇವರಾಜ ಮೊಹಲ್ಲಾದ ಚಂದ್ರಕುಮಾರ್(48) ಮೃತರು. ಉತ್ತನಹಳ್ಳಿ ಬಳಿ ಭಾನುವಾರ ಲೇಔಟ್ ಅಭಿವೃದ್ಧಿ ಕಾಮಗಾರಿ ನಡೆಯುತ್ತಿತ್ತು.

ಈ ಸಂದರ್ಭದಲ್ಲಿ ಚಾಲಕನ ಅಜಾಗರೂಕತೆಯಿಂದ ಜೆಸಿಬಿ ಏಕಾಏಕಿ ಚಂದ್ರಕುಮಾರ್ ಮೇಲೆ ಪಲ್ಟಿಯಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು.

ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.