ಕಂಪಲಾಪುರ: ಕೇಂದ್ರ ತಂಬಾಕು ಮಂಡಳಿ ವತಿಯಿಂದ ‘ಜನ್ ಬಾಗಿಧಾರಿ‘ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಶುಕ್ರವಾರ ಚಿಲ್ಕುಂದ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿತ್ತು.
ಸಮೀಪದ ಚಿಲ್ಕುಂದ ತುಂಬಾಕು ಹರಾಜು ಮಾರುಕಟ್ಟೆ ಸಂಖ್ಯೆ 62ರ ಹರಾಜು ಅದೀಕ್ಷಕ ಸಿದ್ದರಾಮ್ ಡಾಂಗೆ ಮಾತನಾಡಿ, ನಾವು ಆರೋಗ್ಯದಿಂದ ಇರಬೇಕಾದರೆ ನಮ್ಮ ಮನೆಯ ಸುತ್ತಲಿನ ಪರಿಸರ ಸ್ವಚ್ಛವಾಗಿರಬೇಕು. ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಇದರಿಂದ ಸಾಮಾಜಿಕ ಜವಾಬ್ದಾರಿ ಹೆಚ್ಚಿ ಎಲ್ಲರೂ ಆರೋಗ್ಯದಿಂದ ಬದುಕಲು ಸಾಧ್ಯವಾಗುತ್ತದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಮುಂದಿನ ಪೀಳಿಗೆಗೆ ಮರ ಗಿಡಗಳನ್ನು ಬೆಳೆಸಿ ಪರಿಸರವನ್ನ ಸಂರಕ್ಷಣೆ ಮಾಡಬೇಕಾಗಿದೆ ಎಂದರು.
ನಂತರ ’ಸ್ವಚ್ಛತಾ ಹೀ ಸೇವಾ‘ ಕಾರ್ಯಕ್ರಮದ ಅಭಿಯಾನದಡಿ ಚಿಲ್ಕುಂದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ತಂಬಾಕು ಮಂಡಳಿ ಸಿಬ್ಬಂದಿ ಒಳಗೊಂಡು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತಂಬಾಕು ಮಂಡಳಿಯ ಕ್ಷೇತ್ರಾಧಿಕಾರಿ ಸಂದೀಪ್, ರೂಪಾ, ಅಖಿಲಾ, ಪ್ರೀತಿ, ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಸಿಬ್ಬಂದಿ, ತಂಬಾಕು ಮಂಡಳಿ ಸಿಬ್ಬಂದಿ ಹಾಜರಿದ್ದರು.