ಹುಣಸೂರು ತಾಲೂಕು ಬಿಳಿಕೆರೆ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಆಯೋಜಿಸಿದ್ದ ವಿಶೇಷ ಗ್ರಾಮಸಭೆಯಲ್ಲಿ ಇಒ ಕೆ.ಹೊಂಗಯ್ಯ ಮಾತನಾಡಿದರು. ಪಿಡಿಒ ಮಹದೇವಸ್ವಾಮಿ, ಲೋಕೇಶ್, ಶಿವಕುಮಾರ್ ಇತರರಿದ್ದಾರೆ. 
ಮೈಸೂರು

ಗ್ರಾಮೀಣರು ಸೌಲಭ್ಯ ಬಳಸಿಕೊಂಡು ಅಭಿವೃದ್ಧಿ ಹೊಂದಲಿ

Let the rural people develop by utilizing the facilities.

ಹುಣಸೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಕಷ್ಟು ಮಹಾತ್ವಕಾಂಕ್ಷಿ ಯೋಜನೆಗಳು ಗ್ರಾಮೀಣ ಭಾಗದಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಗ್ರಾಮೀಣ ಭಾಗದ ಜನರು ಈ ಯೋಜನೆಗಳನ್ನು ಬಳಸಿಕೊಳ್ಳುವ ಮೂಲಕ ಅಭಿವೃದಿ ್ಧಪಥದತ್ತ ಸಾಗಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಹೊಂಗಯ್ಯ ತಿಳಿಸಿದರು.

ತಾಲೂಕಿನ ಬಿಳಿಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಾತ್ಮಗಾಂಧಿ ಮತ್ತು ಲಾಲ್ ಬಹದೂರ್ ಶಾಸ್ತ್ರೀ ಅವರ ಜನ್ಮ ದಿನಾಚರಣೆ ಹಾಗೂ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು.

ತಾಲೂಕಿನ ಎಲ್ಲ 31 ಗ್ರಾಪಂಗಳಲ್ಲೂ ಗಾಂಧಿ ಜಯಂತಿಗೆ ವಿಶೇಷ ಗ್ರಾಮಸಭೆ ಆಯೋಜಿಸಿದ್ದ ಸರ್ಕಾರದ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸಲಾಗುತ್ತಿದೆ. ಪ್ರಸ್ತುತ ಸ್ವಚ್ಛತಾ ಸೇವೆ ಮತ್ತು ವಿಬಿ ಜಿ ರಾಮ್ ಜಿ ಸೇರಿದಂತೆ ಇತರ ಯೋಜನೆಗಳಡಿಯಲ್ಲಿ ಸಮುದಾಯ ಅಭಿವೃದ್ಧಿಗೆ ಬಹಳಷ್ಟು ಅವಕಾಶ ಕಲ್ಪಿಸಲಾಗಿದ್ದು, ಗ್ರಾಪಂಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಗ್ರಾಮೀಣರು ಬಳಸಿಕೊಳ್ಳಬೇಕು ಎಂದರು.

ಔಟ್ ರೀಚ್ ಸಂಸ್ಥೆ ಐಇಸಿ ಸಂಯೋಜಕ ಜಿ.ಎಸ್. ಜಗದೀಶ್ ಮಾತನಾಡಿ, ವರ್ಷದಲ್ಲಿ ಕನಿಷ್ಠ 100 ಗಂಟೆಗಳ ಕಾಲ ವೈಯಕ್ತಿಕ ಮತ್ತು ಸಮುದಾಯ ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡಲು ಮೀಸಲಿಟ್ಟು, ವಿಷಮುಕ್ತ ವಾತಾವರಣ ನಿರ್ಮಿಸಲು ಹಾಗೂ ಯುವ ಪೀಳಿಗೆಗೆ ಪರಿಶುದ್ಧ ಪರಿಸರ ನಿರ್ಮಿಸಲು ಜನರು ಗ್ರಾಪಂ ಜತೆ ಕೈ ಜೋಡಿಸಲಿ ಎಂದರು.

ಸಭೆಯಲ್ಲಿ ಸರ್ಕಾರದ ಯೋಜನೆಗಳಿಂದ ಗ್ರಾಮದಲ್ಲಿ ಆಗಿರುವಂತಹ ಕೆರೆ, ರಸ್ತೆ, ಚರಂಡಿ, ಶೌಚಗೃಹ ಹಾಗೂ ಇನ್ನಿತರ ಅಭಿವೃದ್ಧಿ ಕುರಿತಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಜತೆಗ ಜನರ ಸಹಭಾಗಿತ್ವ ಯೋಜನೆಯ ಕ್ರಿಯಾ ಯೋಜನೆಯನ್ನು ಸಿದ್ಧಗೊಳಿಸಲಾಯಿತು. ಜತೆಗೆ ಸ್ವಚ್ಛ ಸೇವಾ ಸಂಕಲನದ ಅನುಮೋದನೆ ಪಡೆದುಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಸ್ವಚ್ಛತಾ ಹಿ ಸೇವಾ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಸಭೆಯಲ್ಲಿ ಪಿಡಿಒ ಮಹದೇವಸ್ವಾಮಿ, ಬಿಲ್ ಕಲೆಕ್ಟರ್ ಶಿವಕುಮಾರ್, ಡಿಇಒ ಲೋಕೇಶ್, ವಸಂತ್ ಇತರರು ಇದ್ದರು.