ನಂಜನಗೂಡು: ನಂಜನಗೂಡಿನ ಶಾಲಾ ಶಿಕ್ಷಣ ಇಲಾಖೆ ಹಾಗೂ ಸುತ್ತೂರು ಜೆಎಸ್ಎಸ್ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಿಳಿಗೆರೆ ಹೋಬಳಿ ಮಟ್ಟದ ಕಲೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ಸುತ್ತೂರಿನ ಜೆಎಸ್ಎಸ್ ಪ್ರೌಢಶಾಲೆಯ 13 ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ವೈಯಕ್ತಿಕ ಸ್ಪರ್ಧೆ: ಈಶ್ವರಿ ಕನ್ನಡ ಭಾಷಣ ಪ್ರಥಮ, ರಕ್ಷಿತಾ-ಭಾವಗೀತೆ ಪ್ರಥಮ, ಪ್ರತೀಕ್ಷಾ-ಹಿಂದಿ ಭಾಷಣ ಪ್ರಥಮ, ಎನ್.ಸಿ. ಸುಪ್ರಿತಾ-ಸಂಸ್ಕೃತ ಭಾಷಣ ಪ್ರಥಮ, ಪಲ್ಲವಿ-ಭರತನಾಟ್ಯ ಪ್ರಥಮ, ಎಸ್.ಎಸ್.ಚೈತ್ರಾ-ರಂಗೋಲಿ ಪ್ರಥಮ, ಭೀಮಪ್ಪ- ಮಿಮಿಕ್ರಿ ಪ್ರಥಮ, ಕಲ್ಮೇಶ್ಗೌಡ ಚರ್ಚಾ ಸ್ಪರ್ಧೆ ಪ್ರಥಮ, ರಶ್ಮಿ- ಪ್ರಬಂಧ ಸ್ಪರ್ಧೆ ಪ್ರಥಮ, ವಿ.ಪೃಥ್ವಿ ಹೊಸಕೋಟೆ ಜಾನಪದ ಗೀತೆ ಪ್ರಥಮ, ಭರತ್ ಚಿತ್ರಕಲೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಪ್ರತಿಜ್ಞಾ ಧಾರ್ಮಿಕ ಪಠಣ ದ್ವಿತೀಯ, ಸಂಗಮೇಶ-ಭಾವಗೀತೆ ದ್ವಿತೀಯ, ಶ್ರೇಯಾ-ಭರತನಾಟ್ಯ ದ್ವಿತೀಯ, ಸಾವಿತ್ರಿ ಚರ್ಚಾಸ್ಪರ್ಧೆ ದ್ವಿತೀಯ, ಟಿ.ಎಂ.ಚಂದನಾ ಆಶುಭಾಷಣ ಸ್ಪರ್ಧೆ ದ್ವಿತೀಯ, ಯಶೋದಾ-ಸಂಸ್ಕೃತ ಭಾಷಣ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಶಿವಾನಿ-ಕನ್ನಡ ಭಾಷಣ ತೃತೀಯ, ಜೀವಿತಾ ಇಂಗ್ಲಿಷ್ ಭಾಷಣ ತೃತೀಯ, ಪೃಥ್ವಿರಾಜ್-ಹಿಂದಿ ಭಾಷಣ ತೃತೀಯ, ಸೌಮ್ಯಾ ಧಾರ್ಮಿಕ ಪಠಣ ತೃತೀಯ, ಬಿ.ಎಚ್.ಸಹನಾ ಜಾನಪದ ಗೀತೆ ತೃತೀಯ, ಅಪೂರ್ವ ಕವನ-ಪದ್ಯವಾಚನ ತೃತೀಯ, ಕೆ.ಡಿ.ಸ್ನೇಹಾ ಆಶುಭಾಷಣ ಸ್ಪರ್ಧೆ ತೃತೀಯ ಸ್ಥಾನ ಗಳಿಸಿದ್ದಾರೆ.
ಸಾಮೂಹಿಕ ಸ್ಪರ್ಧೆ : ಮಾನಸ ಮತ್ತು ತಂಡ ಜಾನಪದ ನೃತ್ಯ ಪ್ರಥಮ, ಆಕಾಶ್ ಖಜುಗಾರ್ ಮತ್ತು ಹಿತೇಶ್ ರಸಪ್ರಶ್ನೆ ಪ್ರಥಮ, ಚೇತನ್ ಮತ್ತು ತಂಡ ಜಾನಪದ ನೃತ್ಯ ದ್ವಿತೀಯ, ತನುಜಾ ಮತ್ತು ನೇತ್ರಾವತಿ ರಸಪ್ರಶ್ನೆ ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಸಂಸ್ಥೆಯ ಆಡಳಿತಾಧಿಕಾರಿಗಳು, ಕನ್ನಡ ವಿಭಾಗದ ಮಖ್ಯಶಿಕ್ಷಕ ಮ.ಗು.ಬಸವವಣ್ಣ, ಇಂಗ್ಲಿಷ್ ವಿಭಾಗದ ಮುಖ್ಯಶಿಕ್ಷಕ ಜಿ.ಶಿವಮಲ್ಲು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.