ಹನಗೋಡು: ಹನಗೋಡು ಹೋಬಳಿಯ ಕರಣಕುಪ್ಪೆ ಗ್ರಾಮದಲ್ಲಿ ಐಟಿಸಿ ಸಂಸ್ಥೆಯ ಸಿಎಸ್‌ಆರ್ ನಿಧಿಯ ನೆರವಿನೊಂದಿಗೆ ನೂತನವಾಗಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣವನ್ನು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಂಸದ ಯದುವೀರ್, ಪ್ರಯಾಣಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಗ್ರಾಮೀಣ ಭಾಗದ ಸಾರ್ವಜನಿಕರ ಅಗತ್ಯವನ್ನು ಮನಗಂಡು ಐಟಿಸಿ ಸಂಸ್ಥೆಯು ತನ್ನ ಸಾಮಾಜಿಕ ಜವಾಬ್ದಾರಿ ನಿಧಿಯಡಿ ತಂಗುದಾಣ ನಿರ್ಮಿಸಿರುವುದು ಶ್ಲಾಘನೀಯ. ಕರಣಕುಪ್ಪೆ ಹಾಗೂ ಸುತ್ತಲಿನ ಗ್ರಾಮಗಳ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಇದೇ ವೇಳೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಹಲವು ಬೇಡಿಕೆಗಳ ಮನವಿ ಪತ್ರವನ್ನು ಸಂಸದರಿಗೆ ಸಲ್ಲಿಸಿದರು. ಐಟಿಸಿ ಸಂಸ್ಥೆಯ ಜನರಲ್ ಮ್ಯಾನೇಜರ್ ಪ್ರವೀಣ್, ಚನ್ನವೀರೇಶ್, ಲೋಕೇಶ್, ಮುಖಂಡರಾದ ನಾಗರಾಜು ಮಲ್ಲಾಡಿ, ಕೆ.ಎಂ.ರಾಜು, ಅಶೋಕ್, ಪಾಪಣ್ಣ, ರವಿ, ವಿಕ್ರಂ ರಾಜು ಉಪಸ್ಥಿತರಿದ್ದರು.