ಇತ್ತೀಚೆಗೆ ನಿಧನರಾದ ಹಿರಿಯ ವಿಮರ್ಶಕ ಪ್ರೊ.ಕೆ.ವಿ.ನಾರಾಯಣ್ ಅವರಿಗೆ ನುಡಿ ನಮನ ಕಾರ್ಯಕ್ರಮವನ್ನು ಭಾನುವಾರ ಕಂಪಲಾಪುರದ ದೇವಾಂಗ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು. ಕಂ.ರಾ.ಗೋಪಾಲ್, ಕೆ.ವಿ.ಜಯರಾಮ್, ಪ್ರಕಾಶ್‌ಗೌಡ ಮತ್ತಿತರರಿದ್ದರು.  KV Narayan's contribution to the development of Kannada language is immense
ಮೈಸೂರು

ಕನ್ನಡ ಭಾಷೆ ಬೆಳವಣಿಗೆಗೆ ಕೆ.ವಿ.ನಾರಾಯಣ್ ಕೊಡುಗೆ ಅಪಾರ

ನುಡಿ ನಮನ ಕಾರ್ಯಕ್ರಮದಲ್ಲಿ ಸಾಹಿತಿ ಕಂ.ರಾ.ಗೋಪಾಲ್ ಅಭಿಪ್ರಾಯ

ಕಂಪಲಾಪುರ: ಕನ್ನಡ ಸಾಹಿತ್ಯ, ಭಾಷಾ ಸಾಹಿತ್ಯಕ್ಕೆ ಪ್ರೊ.ಕೆ.ವಿ.ನಾರಾಯಣ್ ಅವರ ಕೊಡುಗೆ ಅಪಾರ ಎಂದು ಸಾಹಿತಿ ಕಂ.ರಾ.ಗೋಪಾಲ್ ಅಭಿಪ್ರಾಯಪಟ್ಟರು.

ಇಲ್ಲಿನ ದೇವಾಂಗ ಸಮುದಾಯ ಭವನದಲ್ಲಿ ಭಾನುವಾರ ಕೆ.ವಿ.ನಾರಾಯಣ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರೊ.ನಾರಾಯಣ್ ಅವರು ನಮ್ಮ ಕಂಪಲಾಪುರದವರೇ ಆಗಿದ್ದು, ಓದಿದ್ದು ಮೈಸೂರು ಮಹಾರಾಜಾ ಕಾಲೇಜಿನಲ್ಲಿ, ಅಲ್ಲಿ ಬಿಎಸ್ಸಿ ಪದವಿ ಮುಗಿಸಿ, ಕವಿ ಡಾ.ಜಿ.ಎಸ್ ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ ‘ಧ್ವನ್ಯಾಲೋಕ ಒಂದು ಅಧ್ಯಯನ’ ಎಂಬ ವಿಷಯ ಕುರಿತು ಮಹಾಪ್ರಬಂಧ ರಚಿಸಿ ಡಾಕ್ಟರೇಟ್ ಪದವಿ ಪಡೆದರು. ಅವರ ಅಗಲಿಕೆಯಿಂದ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದರು.

ನಾರಾಯಣ ಅವರ ಸಹಪಾಠಿ ಕೆ.ವಿ.ಜಯರಾಮ್ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡು ನೋವನ್ನು ಹಂಚಿಕೊಂಡರು.

ಸಹಕಾರ ಸಂಘದ ನಿರ್ದೇಶಕ ಪ್ರಕಾಶ್‌ಗೌಡ, ಗ್ರಾಪಂ ಮ್ಯಾಜಿ ಸದಸ್ಯ ಮಂಜು, ಕೆ.ಸಿ.ಗೋಪು, ನಾರಾಯಣ್ ಸಂಬಂಧಿ ಹರ್ಷ, ಬೆಂಗಳೂರು ಉದ್ಯೋಗ ವಿನಿಮಯ ಕೇಂದ್ರದ ನಿವೃತ್ತ ಸಹಾಯಕ ಅಧಿಕಾರಿ ಕೆ.ಎಂ.ಕುಮಾರ್ ಮತ್ತಿತರರು ಹಾಜರಿದ್ದರು.