ಮೈಸೂರು: ಇತ್ತೀಚಿನ ದಿನಗಳಲ್ಲಿ ಮೈಸೂರು ಅರಮನೆಯ ಸುತ್ತಮುತ್ತ ವಿವಾದಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಯಾರ ಕೆಟ್ಟ ದೃಷ್ಟಿ ಬೀಳಬಾರದು ಎಂದು ಕುಂಬಳಕಾಯಿ ದೃಷ್ಟಿ ತೆಗೆಯಲಾಯಿತು.
ಅಂಬಾ ವಿಲಾಸ ಅರಮನೆಯ ಜಯಮಾರ್ತಾಂಡ ದ್ವಾರದ ಮುಂಭಾಗ ಜಾನಪದ ಶೈಲಿಯ ಸಂಪ್ರದಾಯದಂತೆ ಅರಮನೆಗೆ ಕುಂಬಳಕಾಯಿ ದೃಷ್ಟಿ ತೆಗೆದು ಒಡೆದು ದೃಷ್ಟಿ ನಿವಾರಣೆ ಮಾಡಲಾಯಿತು.
ಮುಖಂಡರಾದ ಜಯಸಿಂಹ, ಸಂದೇಶ್, ಬೈರತಿ ಲಿಂಗರಾಜು, ದಯಾನಂದ ನಾಯಕ್ ಇದ್ದರು.