ಮೈಸೂರು ಮೃಗಾಲಯ 
ಮೈಸೂರು

ಮಂಗಳವಾರವೂ ತೆರೆದಿರಲಿದ ಮೃಗಾಲಯ

ಪ್ರಮುಖ ಮುಖ್ಯಾಂಶಗಳು

  • ಮೃಗಾಲಯವು ವಾರದ ರಜೆ ದಿನವಾದ ಮಂಗಳವಾರವೂ ಓಪನ್
  • ಕಾರಂಜಿ ಕೆರೆ ಪ್ರಕೃತಿ ಉದ್ಯಾನ ಸಾರ್ವಜನಿಕರ ವೀಕ್ಷಣೆಗೆ ಲಭ್ಯ
ಮೈಸೂರು: ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಇರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಪ್ರವಾಸಿಗರು, ಜನಸಾಮಾನ್ಯರ ಅನುಕೂಲಕ್ಕಾಗಿ ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯವು ವಾರದ ರಜೆ ದಿನವಾದ ಮಂಗಳವಾರವೂ (ಏ.28ರಂದು) ತೆರೆದಿರುತ್ತದೆ. 
ಅಂದು ಮೃಗಾಲಯದೊಂದಿಗೆ ಕಾರಂಜಿ ಕೆರೆ ಪ್ರಕೃತಿ ಉದ್ಯಾನ ಸಾರ್ವಜನಿಕರ ವೀಕ್ಷಣೆಗೆ ಲಭ್ಯ ಇರಲಿದೆ ಎಂದು ಮೃಗಾಲಯದ ಪ್ರಕಟಣೆ ತಿಳಿಸಿದೆ.