ಮೈಸೂರು ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಬುಧವಾರ ಐಕ್ಯತೆಯ ಚೇತನ: ಪ್ರೊ.ಬಿ. ಕೃಷ್ಣಪ್ಪ ಚಿಂತನ-ಮಂಥನ ಕಾರ್ಯಕ್ರಮವನ್ನು ಪ್ರಗತಿಪರ ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಉದ್ಘಾಟಿಸಿದರು. ಇಂದಿರಾ ಕೃಷ್ಣಪ್ಪ, ಪ್ರೊ.ಕುಮಾರಸ್ವಾಮಿ ಕುಡ್ಲಾಪುರ, ಕೆ.ಎನ್. ಶಿವಲಿಂಗಯ್ಯ ಇದ್ದರು. 
ಮೈಸೂರು

ದಸಂಸ ಕುರಿತು ಯುವಜನರಿಗೆ ತಿಳಿಸಬೇಕು : ಚಿಂತಕ ಪ್ರೊ. ರಾಜೇಂದ್ರ ಚೆನ್ನಿ

ಮೈಸೂರು:Youth need to be informed about Dasamsa: Thinker Prof. Rajendra Chenni
ಒಡಲು ಟ್ರಸ್ಟ್ ಮತ್ತು ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್ ವತಿಯಿಂದ ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಬುಧವಾರ ಐಕ್ಯತೆಯ ಚೇತನ: ಪ್ರೊ.ಬಿ. ಕೃಷ್ಣಪ್ಪ ಚಿಂತನ-ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಸಂಸ ಸಂಸ್ಥಾಪಕ ಪ್ರೊ.ಬಿ. ಕೃಷ್ಣಪ್ಪ ಬಹಳ ಸೈದ್ಧಾಂತಿಕವಾಗಿ ತಮ್ಮ ನಿಲುವುಗಳನ್ನು ಪ್ರಸ್ತುತ ಪಡಿಸುತ್ತಿದ್ದರು. ಅವರು ಸಮಾಜದ ಮಹಾನ್ ಶಿಕ್ಷಕ. ಅವರ ಚಿಂತನೆಗಳನ್ನು ಯುವಜನರಿಗೆ ತಲುಪಿಸಬೇಕು ಎಂದರು.

ನಾವು ಪ್ರೊ.ಬಿ. ಕೃಷ್ಣಪ್ಪ ಅವರ ಚಿಂತನೆಗೆ ಮರಳ ಬೇಕಾಗಿದೆ. ಜಾತಿ ವ್ಯವಸ್ಥೆಯಿಂದ ಯಾರಿಗೆಲ್ಲ ಅನ್ಯಾಯವಾಗಿದೆಯೋ ಅವರೆಲ್ಲರು ದಲಿತರು ಎಂಬ ವ್ಯಾಖ್ಯಾನವನ್ನು ಕೃಷ್ಣಪ್ಪ ನೀಡಿದ್ದರು. ತುಳಿತಕ್ಕೆ ಒಳಗಾದವರು, ಅನ್ಯಾಯಕ್ಕೆ ಒಳಗಾದವರು ಒಟ್ಟಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದ್ದರು. ಜಾತಿ ಹಾಗೂ ವರ್ಗ ವಿನಾಶ ಆಗಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು ಎಂದು ಹೇಳಿದರು.

ಪ್ರಸ್ತುತ ಅಧಿಕಾರದಲ್ಲಿರುವ ಬಲಪಂಥೀಯ ಸರ್ಕಾರ ಹಾಗೂ ಅದರ ಹಿಂದೆ ಇರುವ ಆರ್‌ಎಸ್‌ಎಸ್ ಭಾರತೀಯ ನಾಗರೀಕತೆಯನ್ನು ನಾಶ ಮಾಡುತ್ತಿದೆ. ಮುಸ್ಲಿಮರನ್ನು ದೇಶದ್ರೋಹಿಗಳು ಎಂಬ ರೀತಿಯಲ್ಲಿ ಅವರು ಬಿಂಬಿಸುತ್ತಿದ್ದಾರೆ. ದೇಶದಲ್ಲಿ ಮನುಸ್ಮತಿಯನ್ನು ಜಾರಿಗೆ ತರಲು ಅವರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಲೇಖಕಿ ಇಂದಿರಾ ಕೃಷ್ಣಪ್ಪ, ಒಡಲು ಟ್ರಸ್ಟ್ ಅಧ್ಯಕ್ಷ ಪ್ರೊ.ಕುಮಾರಸ್ವಾಮಿ ಕುಡ್ಲಾಪುರ, ಕಾರ್ಯದರ್ಶಿ ಕೆ.ಎನ್. ಶಿವಲಿಂಗಯ್ಯ ಇದ್ದರು.