ಹುಣಸೂರು ತಾಲೂಕು ತಟ್ಟೆಕೆರೆ ಗ್ರಾಮದಲ್ಲಿ ವ್ಹೀಲಿಂಗ್ ಮಾಡಿ ಸಿಕ್ಕುಬಿದ್ದ ಯುವಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದರು. ಇನ್ ಸ್ಪೆೆಕ್ಟರ್ ಮುನಿಯಪ್ಪ, ದಿನೇಶ್ ಇತರ ಸಿಬ್ಬಂದಿ ಇದ್ದಾರೆ.
- ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಯುವಕನನ್ನು ಪೊಲೀಸರ ಬಂಧಿಸಿದ್ದಾರೆ
ಹುಣಸೂರು: ಬೈಕ್ ವ್ಹೀಲಿಂಗ್ ಮಾಡುವ ವೀಡಿಯೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಯುವಕನನ್ನು ಪೊಲೀಸರ ಬಂಧಿಸಿದ್ದಾರೆ.
ತಾಲೂಕಿನ ತಟ್ಟೆಕೆರೆ ಗ್ರಾಮದ ಪ್ರಜ್ವಲ್ ವ್ಹೀಲಿಂಗ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಮಾಡಿದ್ದ. ಅದನ್ನು ಗಮನಿಸಿದ ಗ್ರಾಮಾಂತರ ಠಾಣೆ ಪೊಲೀಸರು ಗ್ರಾಮಕ್ಕೆ ತರಳಿ ಆತನನ್ನು ಮತ್ತು ಆತನ ಬೈಕನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಗ್ರಾಮಾಂತರ ಠಾಣೆ ಇನ್‌ಸ್ಪೆೆಕ್ಟರ್ ಮುನಿಯಪ್ಪ, ಗ್ರಾಮೀಣ ಭಾಗಗಳಲ್ಲಿ ಈಗಾಗಲೇ ಇಂತಹ 4-5 ಪ್ರಕರಣಗಳನ್ನು ದಾಖಲಿಸಿದ್ದು, ಕಾನೂನುಬಾಹಿರ ಕ್ರಮಗಳನ್ನು ಅನುಸರಿಸಬಾರದೆಂದು ಅರಿವು ಮೂಡಿಸುವ ಕಾರ್ಯಗಳನ್ನು ನಡೆಸಿದ್ದೇವೆ. ಯುವಕರು ಹುಚ್ಚು ಸಾಹಸ, ಯಾರನ್ನೋ ಮೆಚ್ಚಿಸಲು ಇಂತಹ ಪ್ರಯತ್ನಗಳನ್ನು ನಡೆಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೂಲಿನಾಲಿ ಮಾಡಿ ಬದುಕುವ ಕುಟುಂಬಗಳ ಯುವಕರು ಇಂತಹ ಕಾರ್ಯವನ್ನು ನಿಲ್ಲಿಸಬೇಕೆಂದರು.