ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಆಯೀಷಾ ಅಮ್ ರೀತ್, ಡಾ. ತೇಜಸ್ವಿನಿ, ಡಾ.ಎಂ. ಅಬ್ದುಲ್ ರಹಿಮಾನ್ ಇನ್ನಿತರರಿದ್ದರು.
- ಸ್ತ್ರೀರೋಗ ತಜ್ಞೆ ಡಾ.ಆಯೀಷಾ ಅಮ್ ರೀತ್ ಸಲಹೆ
- ‘ಪಿಸಿಒಡಿ ಕುರಿತು ಮೌನ ಮುರಿಯಿರಿ ಮತ್ತು ಆರೋಗ್ಯ ನಾರಿ’ ಜಾಗೃತಿ ಕಾರ್ಯಕ್ರಮ
ಮೈಸೂರು: ಯುವತಿಯರಲ್ಲಿ ಹಾರ್ಮೋನ್ ಅಸಮತೋಲನ, ಅಸಮಯದ ಮಾಸಿಕ ಚಕ್ರ, ತೂಕ ಹೆಚ್ಚಳ, ಮೊಡವೆ, ಕೂದಲು ಉದುರುವಿಕೆ ಮುಂತಾದ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸ್ತ್ರೀರೋಗ ತಜ್ಞೆ ಡಾ.ಆಯೀಷಾ ಅಮ್ ರೀತ್ ಹೇಳಿದರು.
ವಿದ್ಯಾರ್ಥಿ ಕ್ಷೇಮಪಾಲನೆ ಸಮಿತಿ, ಲೈಂಗಿಕ ಕಿರುಕುಳ ತಡೆ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಸಹಯೋಗದಲ್ಲಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ‘ಪಿಸಿಒಡಿ ಕುರಿತು ಮೌನ ಮುರಿಯಿರಿ ಮತ್ತು ಆರೋಗ್ಯ ನಾರಿ’ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು
ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಯೋಗಾಭ್ಯಾಸ ಹಾಗೂ ಮಾನಸಿಕ ಒತ್ತಡ ನಿಯಂತ್ರಣದ ಅಗತ್ಯತೆ ಬಗ್ಗೆ ವಿವರಿಸಿದರು. ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆಯಲು ಸಲಹೆ ನೀಡಿದರು.
ಸ್ತ್ರೀರೋಗ ತಜ್ಞೆ ಡಾ.ತೇಜಸ್ವಿನಿ ಅವರು ಪಿಸಿಒಡಿ ಸಮಸ್ಯೆಯ ಕಾರಣಗಳು, ಲಕ್ಷಣಗಳು, ಪರಿಣಾಮಗಳು ಹಾಗೂ ಚಿಕಿತ್ಸೆ ಕುರಿತು ವಿವರವಾಗಿ ತಿಳಿಸಿದರು. ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆ ಬಗ್ಗೆ ಎಚ್ಚರದಿಂದಿರಿ ಎಂದು ಕಿವಿಮಾತು ಹೇಳಿದರು.
ಪ್ರಾಂಶುಪಾಲ ಡಾ.ಎಂ.ಅಬ್ದುಲ್ ರಹಿಮಾನ್, ಕಾರ್ಯಕ್ರಮದ ಸಂಯೋಜಕ ಡಾ.ವಿ.ನಂದಕುಮಾರ್, ಅಧ್ಯಾಪಕರಾದ ರಾಜೇಶ್ವರಿ, ಎನ್.ಬೃಂದಾ, ಎಂ.ಸಿ.ಸುಧಾ , ಎನ್.ಕೆ.ಲೀಲಾವತಿ , ಎಂ.ಮಮತಾ , ಡಾ.ಲಕ್ಷ್ಮೀ ಎಂ.ಪಲ್ಲೋಟಿ ಹಾಗೂ ಸಿ.ಸಿದ್ದುರಾಜು, ವಿದ್ಯಾರ್ಥಿ ಕ್ಷೇಮಪಾಲನೆ ಸಮಿತಿಯ ಸಂಯೋಜಕಿ ಡಾ.ಪ್ರೀತಿ ಎನ್. ತಲ್ಲೂರು ಇನ್ನಿತರರಿದ್ದರು.
ಸುಮಾರು 350 ವಿದ್ಯಾರ್ಥಿನಿಯರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.