ಬನ್ನಿಕುಪ್ಪೆ ಇಲ್ಲಿನ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಓಂ್ರಿತಿಭಾ ಕಾರಂಜಿ ಕಾರ್ಯಕ್ರಮವನ್ನು ತಾಲೂಕು ಗಣ್ಯರು ಉದ್ಘಾಟಿಸಿದರು ಪಿ.ಮಹದೇವ್, ಮೂರ್ತಿನಾಯಕ, ಗೋವಿಂದನಾಯಕ, ಗೋವಿಂದೇಗೌಡ ಇತರರಿದ್ದರು.
- ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಮಹದೇವ್
- ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ
ಬನ್ನಿಕುಪ್ಪೆ : ಇಲ್ಲಿನ ಪ್ರೌಢಶಾಲಾ ಆವರಣದಲ್ಲಿ 2025-26ನೇ ಸಾಲಿನ ಪ್ರತಿಭಾ ಕಾರಂಜಿಯ ಕಾರ್ಯಕ್ರಮ ಬುಧವಾರ ಜರುಗಿತು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಮಹದೇವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅವಕಾಶಗಳು ಸಾಕಷ್ಟು ಇವೆ. ಆದರೆ ಅದನ್ನು ಸದುಪಯೋಗಪಡಿಸಿಕೊಳ್ಳಲು ಸ್ಪಷ್ಟ ನಿರ್ಧಾರ ಹಾಗೂ ಗುರಿ ಹೊಂದುವ ಚಾಣಾಕ್ಷತೆ ಬೇಕು. ಆಸಕ್ತಿ ಇದ್ದಾಗ ಏನಾದರೂ ಸಾಧಿಸುವವರೆಗೂ ಕಲಿಯಬೇಕು, ಕೌಶಲ ಎಂಬುದು ಎಲ್ಲರಲ್ಲಿದ್ದು, ನಾವು ಏಕಾಗ್ರತೆಯಿಂದ ಅದನ್ನು ಕಲಿಯಬೇಕು. ಇದರಲ್ಲಿ ಶಿಕ್ಷಕರ ಪಾತ್ರ ಮುಖ್ಯ. ಪ್ರತಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವುದು ಅವರ ಕರ್ತವ್ಯವಾಗಿದೆ ಎಂದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಮೂರ್ತಿನಾಯಕ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದನಾಯಕ, ಸದಸ್ಯ ಬಿ.ಎಸ್.ಲೋಕೇಶ್, ಮಾಜಿ ಉಪಾಧ್ಯಕ್ಷ ಮಂಜು,ಪಿಡಿಒ ರಾಘವೇಂದ್ರ ಪ್ರಸನ್ನ, ಸಿ.ಡಿ.ಸಿ ಉಪಾಧ್ಯಕ್ಷ ಗೋವಿಂದೇಗೌಡ, ಉಪ ಪ್ರಾಂಶುಪಾಲೆ ಸೌಮ್ಯಾ, ಮುಖಂಡರಾದ ಶಿವಕುಮಾರ್,ರಂಗಸ್ವಾಮಿ,ಗಣೇಶ,ಚಿಕ್ಕಸ್ವಾಮಿ, ವಿಧ್ಯಾರ್ಥಿಗಳು, ಶಿಕ್ಷಕರು ಇತರರು ಇದ್ದರು.