‘ಪ್ರದರ್ಶನಿ’ ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್, ರಘುನಂದನ, ಪ್ರೊ.ಶರಣಪ್ಪ ವಿ.ಹಲಸೆ ಇದ್ದರು.
ನಗರದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಏಕಾತ್ಮ ಮಾನವ ದರ್ಶನ ಸಮ್ಮೇಳನದ ‘ಪ್ರದರ್ಶನಿ’ ಪ್ರದರ್ಶನವನ್ನು ಶಿಲ್ಪಿ ಅರುಣ್ ಯೋಗಿರಾಜ್ ಬುಧವಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಜಗತ್ತು ಯುದ್ಧದ ಕಾರ್ಮೋಡ ಕವಿದು ತತ್ತರಿಸಿರುವ ಈ ಕಾಲದಲ್ಲಿ ನಾವು ಆನಂದವಾಗಿರಲು ಕಾರಣ ಇಲ್ಲಿನ ಪರಂಪರೆ. ಏಕಾತ್ಮ ಮಾನವ ದರ್ಶನ ಮೈಸೂರು ನಗರದಲ್ಲಿ ನಡೆಯುತ್ತಿರುವುದು ಯೋಗಾಯೋಗ. ಮಾನವ- ಪ್ರಕೃತಿ ನಡುವಿನ ಸಮನ್ವಯದ ಸಿದ್ಧಾಂತ ಇಂದು ಜಗತ್ತಿಗೆ ಅಗತ್ಯವಾಗಿದೆ. ಈ ಮೂಲ ಶ್ರೇಷ್ಠ ಚಿಂತನೆಯನ್ನು ನೀಡಲು ಶ್ರಮಿಸುತ್ತಿರುವ ಆಯೋಜಕರಿಗೆ ಅಭಿನಂದನೆಗಳು ಎಂದರು.
ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಟೋಳಿ ಸದಸ್ಯ ರಘುನಂದನ ಮಾತನಾಡಿದರು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಇದ್ದರು.