ಬೆಟ್ಟದಪುರ ಸಮೀಪದ ಕೊಣಸೂರಿನ ಆಯುಷ ಆರೋಗ್ಯ ಯೋಗ ದಿನಾಚರಣೆಯ ಅಂಗವಾಗಿ ಯೋಗ ತಾಲೀಮು ನಡೆಯಿತು. 
ಮೈಸೂರು

ಕೊಣಸೂರಿನಲ್ಲಿ ಯೋಗ ತಾಲೀಮು

ಎಂ.ರವಿ
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕೊಣಸೂರಿನ ಆಯುಷ ಆರೋಗ್ಯ ಮಂದಿರದ ವತಿಯಿಂದ ಮಂಗಳವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯೋಗ ತಾಲೀಮು ನಡೆಯಿತು.
ಯೋಗ ತರಬೇತುದಾರರಾದ ಆಶಾ ಮಹದೇವ ಮಾತನಾಡಿ, ಯೋಗವನ್ನು ಕೇವಲ ವರ್ಷಕ್ಕೊಮ್ಮೆ ಆಚರಿಸುವ ಕಾರ್ಯಕ್ರಮವಾಗಿ ನೋಡದೆ, 365 ದಿನಗಳೂ ನಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿದ್ದು, ಔಷಧಮುಕ್ತ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದರು.
ಶಾಲೆಯ ಮುಖ್ಯಶಿಕ್ಷಕಿ ಮಂಜುಳಾ ಮಾತನಾಡಿ, ಆಯುಷ್ ಇಲಾಖೆಯಿಂದ ನಡೆಸಲಾಗುತ್ತಿರುವ ಯೋಗ ತರಬೇತಿ ಶಾಲಾ ಮಕ್ಕಳಿಗೆ ಉಪಯುಕ್ತವಾಗಿದ್ದು, ಸಾರ್ವಜನಿಕರಲ್ಲಿಯೂ ಯೋಗದ ಬಗ್ಗೆ ಅರಿವು ಮೂಡಿಸಲು ಇಲಾಖೆ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಯುಷ್ ಇಲಾಖೆಯ ರವಿಶಂಕರ್ ಹಾಗೂ ಶಾಲೆಯ ಶಿಕ್ಷಕರಾದ ಎಂ.ಮಂಜುಳಾ, ಶಿವಮೂರ್ತಿ, ಶಶಿಧರ್, ಮಂಜುಳಾ, ವನಿತಾ ಮತ್ತು ಸಿಬ್ಬಂದಿ ಇದ್ದರು.